Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 10 ಮಾರ್ಚ್ 2019 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಹೀಗಾಗಿ ನೆಮ್ಮದಿಗಾಗಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಮಕ್ಕಳ ಆರೋಗ್ಯ ಕೈಕೊಡುವುದು. ಅದರ ಹೊರತಾಗಿ ಬಂಧುಮಿತ್ರರಿಂದ ಶುಭ ಸುದ್ದಿಯಿದೆ.

ವೃಷಭ: ಕಷ್ಟ ಕಾಲದಲ್ಲಿ ನಿಮಗೆ ನೆರವಾದವರಿಗೆ ಪ್ರತ್ಯುಪಕಾರ ಮಾಡಲು ಇದೇ ಸಕಾಲ. ಅರ್ಧಕ್ಕೆ ನಿಂತ ಕೆಲಸಗಳನ್ನು ಪುನರಾರಂಭಿಸಿ. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ: ನೀರಿಗಾಗಿ ಪರಿತಪಿಸಬೇಕಾದೀತು. ಪೂರ್ವ ದಿಕ್ಕಿನ ಪ್ರಯಾಣ ನಿಮಗೆ ಶುಭವುಂಟುಮಾಡಲಿದೆ. ಹಿರಿಯರ ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆಯುವುದು. ಆರ್ಥಿಕವಾಗಿ ಸಮಾಧಾನಕರ ವಾತಾವರಣವಿರುವುದು.

ಕರ್ಕಟಕ: ಮಾತಿನ ಮೇಲೆ ನಿಗಾ ಇಟ್ಟು, ಶಾಂತಿಯಿಂದಿರುವುದೇ ಲೇಸು. ಸಂಗಾತಿಯ ಮಾತಿಗೆ ಕಿವಿಗೊಡಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು.  ದೇವತಾ ಪ್ರಾರ್ಥನೆ ಮಾಡಿ. ಒಳಿತಾಗುತ್ತದೆ.

ಸಿಂಹ: ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆರಂಭದಲ್ಲಿದ್ದ ಉತ್ಸಾಹ ಮತ್ತೆ ತೋರದು. ವಿಷ್ಣು ಸಹಸ್ರ ನಾಮ ಪಠಿಸಿ, ಇದರಿಂದ ಮನಸ್ಸಿಗೂ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬರುವುದು.

ಕನ್ಯಾ: ಕಲಾಕ್ಷೇತ್ರದಲ್ಲಿರುವವರಿಗೆ ಇಂದು ಶುಭ ಫಲ ಕಾಣಬಹುದು. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ಎದುರಾಗುವುದು. ಬಂಧು ಮಿತ್ರರು ಅಚ್ಚರಿಯ ವಾರ್ತೆಯೊಂದಿಗೆ ಅನಿರೀಕ್ಷಿತವಾಗಿ ಆಗಮಿಸುವರು.

ತುಲಾ: ಹಿರಿಯರ ಮನಸ್ಸಿಗೆ ನೋವುಂಟುಮಾಡುವ ಕೆಲಸ ಮಾಡಬೇಡಿ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳೊಂದಿಗೆ ಕಲಹವಾಗಬಹುದು. ಎಚ್ಚರಿಕೆಯಿಂದಿರಿ. ದುಡುಕು ವರ್ತನೆ ಬೇಡ.

ವೃಶ್ಚಿಕ: ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಕಾಲ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಬಂಧು ಮಿತ್ರರೊಡನೆ ಪ್ರವಾಸ ತೆರಳುವಿರಿ. ನೂತನ ದಂಪತಿಗಳಿಗೆ ಸಂತಾನ ಫಲದ ಸೂಚನೆ ದೊರೆಯಲಿದೆ.

ಧನು: ಹಿರಿಯರಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಸಾಲಗಾರರು ನಿಮ್ಮ ಮನೆ ಬಾಗಿಲಿಗೆ ಬರುವರು. ಆರ್ಥಿಕ ಗಳಿಕೆಯ ಮಾರ್ಗದ ಬಗ್ಗೆ ಯೋಚನೆ ಮಾಡಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಕರ: ಎಲ್ಲವೂ ನೀವು ನೆನೆಸಿಕೊಂಡಂತೇ ನಡೆಯಲಿದೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ, ಗೌರವಕ್ಕೆ ಪಾತ್ರರಾಗುವಿರಿ. ಆದರೆ ಸಂಗಾತಿಯೊಡನೆ ಮನಸ್ತಾಪ ಸಾಧ್ಯತೆಯಿದೆ. ಎಚ್ಚರಿಕೆ ಅಗತ್ಯ.

ಕುಂಭ: ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚಗಳಾಗಲಿವೆ. ಮಕ್ಕಳು ನಿಮ್ಮ ಬಗ್ಗೆ ಬೇಸರಗೊಳ್ಳುವರು. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಲಿವೆ. ದೇವತಾ ಪ್ರಾರ್ಥನೆ ಮಾಡಿದರೆ ಎಲ್ಲವೂ ಶುಭವಾಗುವುದು.

ಮೀನ: ಯಾವುದೋ ಭಾವನಾತ್ಮಕ ವಿಚಾರ ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ. ಹೃದಯಕ್ಕೆ ಹತ್ತಿರವಾದವರ ಮಾತಿಗೆ ಬೆಲೆ ಕೊಡಿ. ನಿರುದ್ಯೋಗಿಗಳು ತಾತ್ಕಾಲಿಕವಾಗಿ ಉದ್ಯೋಗ ಕಂಡುಕೊಳ್ಳುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಯದಲ್ಲಿ ಹಣ ಹೂಡಿಕೆ ಮಾಡಿದರೆ ಧನನಷ್ಟವಾಗುವುದು ಖಂಡಿತ