Publish Date: Thu, 14 Nov 2024 (08:37 IST)
Updated Date: Thu, 14 Nov 2024 (08:40 IST)
ಬೆಂಗಳೂರು: ಗುರುವಾರ ಮಹಾವಿಷ್ಣುವಿಗೆ ವಿಶೇಷವಾದ ದಿನ. ಈ ದಿನ ಮಹಾವಿಷ್ಣುವಿನ ಈ ಒಂದು ಮಂತ್ರವನ್ನು 21 ಬಾರಿ ಪಠಿಸುವುದರಿಂದ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ತ್ರಿಮೂರ್ತಿಗಳಲ್ಲಿ ಮಹಾವಿಷ್ಣುವು ಲೋಕಪರಿಪಾಲಕ. ಆತನನ್ನು ಆರಾಧಿಸುವುದರಿಂದ ಮನಸ್ಸಿಗೆ ಆನಂದ ಸಿಗುವುದು. ಜೊತೆಗೆ ಆಂತರಿಕ ದುಃಖಗಳು ನಿವಾರಣೆಯಾಗಿ ನೆಮ್ಮದಿ ಕಾಣುತ್ತೀರಿ. ಅದರಲ್ಲೂ ವಿಶೇಷವಾಗಿ ಗುರುವಾರ ಮಹಾವಿಷ್ಣುವನ್ನು ಪೂಜೆ ಮಾಡುವುದರಿಂದ ಸಂಪತ್ತೂ ವೃದ್ಧಿಯಾಗುತ್ತದೆ.
ಓಂ ನಮೋಃ ನಾರಾಯಣಾಯ
ಇದು ಮಹಾವಿಷ್ಣುವಿನ ಮೂಲಮಂತ್ರವಾಗಿದೆ. ಇದು ಅತ್ಯಂತ ಪ್ರಭಾವಶಾಲೀ ಮಂತ್ರವಾಗಿದ್ದು ಇದನ್ನು ಪ್ರತೀ ಗುರುವಾರಗಳಂದು 21 ಬಾರಿ ಪಠಿಸುತ್ತಾ ಬನ್ನಿ. ಇದರಿಂದ ನಿಮ್ಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತೀರಿ. ಅಷ್ಟೇ ಅಲ್ಲದೆ ದೈಹಿಕ ಬಾಧೆಗಳೂ ನಿವಾರಣೆಯಾಗುವುದು.
ನಾರಾಯಣ ಎಂಬ ಒಂದು ಶಬ್ಧದಲ್ಲಿ ಇಡೀ ಬ್ರಹ್ಮಾಂಡವೇ ಅಡಕವಾಗಿದೆ. ಮಹಾವಿಷ್ಣುವಿನ ಮಂತ್ರ ಚಿಕ್ಕದಾಗಿದ್ದರೂ ಅತ್ಯಂತ ಪ್ರಭಾವಶಾಲಿಯಾಗಿದೆ. ಸರ್ವರಲ್ಲಿ ನೆಲೆಯಾಗಿರುವ ಮಹಾವಿಷ್ಣುವಿಗೆ ನನ್ನ ನಮಸ್ಕಾರ ಎಂಬುದು ಈ ಮಂತ್ರದ ಅರ್ಥವಾಗಿದೆ. ಹೀಗಾಗಿ ತಪ್ಪದೇ ಪಠಿಸಿ.