ಬೆಂಗಳೂರು: ಇಂದು ಶುಕ್ರವಾರವಾಗಿದ್ದು ಮಹಾಲಕ್ಷ್ಮಿಯ ದಿನವಾಗಿದೆ. ಸಂಪತ್ತಿನ ಅಧಿದೇವತೆಯಾದ ಮಹಾಲಕ್ಷ್ಮಿಯನ್ನು ಈ ಮಂತ್ರದಿಂದ ಜಪಿಸುವುದರಿಂದ ಧನಾಗಮನ ಖಚಿತವಾಗಿರುತ್ತದೆ.
ಪ್ರತಿಯೊಬ್ಬ ದೇವರಿಗೂ ಗಾಯತ್ರಿ ಮಂತ್ರವಿದೆ. ಅದೇ ರೀತಿ ಲಕ್ಷ್ಮೀ ದೇವಿಗೂ ಗಾಯತ್ರೀ ಮಂತ್ರವಿದೆ. ಇದನ್ನು ಶುಕ್ರವಾರಗಳಂದು ಮಾತ್ರವಲ್ಲ, ಪ್ರತಿನಿತ್ಯವೂ ಪಠಿಸುವುದರಿಂದ ಸಾಕಷ್ಟು ಅನುಕೂಲಗಳು, ಸಮೃದ್ಧಿ ನಿಮ್ಮದಾಗುತ್ತದೆ. ಅದೃಷ್ಟ ದೇವತೆಯಾದ ಮಹಾಲಕ್ಷ್ಮಿಯನ್ನು ಸ್ತೋತ್ರ, ಮಂತ್ರಗಳಿಂದ ಪಠಿಸಿದರೆ ಆಕೆ ಬಹುಬೇಗನೇ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆಯಿದೆ.
ಲಕ್ಷ್ಮೀ ಗಾಯತ್ರಿ ಮಂತ್ರ ಹೀಗಿದೆ:
ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ
ಈ ಮಂತ್ರವನ್ನು ವಿಶೇಷವಾಗಿ ಹುಣ್ಣಮೆ ದಿನದಿಂದ ಆರಂಭಿಸಿ ಪ್ರತಿನಿತ್ಯ ಪಠಿಸುವುದರಿಂದ ನಿಮ್ಮ ದಾರಿದ್ರ್ಯ ನಿವಾರಣೆಯಾಗಿ ಸುಖ, ಸಮೃದ್ಧಿ ಪಡೆಯುತ್ತೀರಿ. ಪ್ರತಿನಿತ್ಯ 108 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಒಳಿತಾಗುತ್ತದೆ. ಸಂಪತ್ತು, ಬುದ್ಧಿಯನ್ನು ಅನುಗ್ರಹಿಸು ಎಂದು ಲಕ್ಷ್ಮೀ ದೇವಿಗೆ ಶಿರಸಾ ವಹಿಸಿ ನಮಸ್ಕರಿಸುವ ಮಂತ್ರ ಇದಾಗಿದೆ.