Publish Date: Wed, 06 Nov 2024 (08:38 IST)
Updated Date: Wed, 06 Nov 2024 (08:49 IST)
ಬೆಂಗಳೂರು: ರಾತ್ರಿ ಮಲಗುವ ಮುನ್ನ ದೇವರನ್ನು ಸ್ಮರಿಸಿ ಮಲಗಿದರೆ ಯಾವ ಕೆಟ್ಟ ಕನಸುಗಳೂ ಬೀಳುವುದಿಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಿದ್ದರೆ ರಾತ್ರಿ ಮಲಗುವ ಮುನ್ನ ಕೆಟ್ಟ ಕನಸು ಬೀಳದಂತೆ ಯಾವ ಮಂತ್ರ ಹೇಳಬೇಕು ನೋಡಿ.
ನಾವು ರಾತ್ರಿ ಮಲಗುವ ಮುನ್ನ ಏನು ಯೋಚಿಸುತ್ತೇವೋ ಅದುವೇ ನಮ್ಮ ಕನಸಿನ ರೂಪದಲ್ಲಿ ಬರುತ್ತದೆ. ಅದಕ್ಕೇ ರಾತ್ರಿ ಮಲಗುವ ಮುನ್ನ ಕೆಟ್ಟ ಯೋಚನೆಗಳನ್ನು ಮಾಡಬಾರದು ಎನ್ನುತ್ತಾರೆ. ಇದು ವೈಜ್ಞಾನಿಕವಾಗಿಯೂ ಸತ್ಯವಾಗಿದೆ. ಇದಕ್ಕೇ ಹಿರಿಯರು ಮಲಗುವ ಮುನ್ನ ದೇವರ ಧ್ಯಾನ ಮಾಡಲು ಸಲಹೆ ನೀಡುತ್ತಾರೆ. ದೇವರ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿ ಬೇಡದ ಯೋಚನೆಗಳೆಲ್ಲಾ ದೂರವಾಗುವುದು.
ರಾತ್ರಿ ಮಲಗುವ ಮುನ್ನ ಈ ಮಂತ್ರವನ್ನು ಹೇಳಿ:
ಅಚ್ಯುತಂ ಕೇಶಂ ವಿಷ್ಣುಂ ಹರಿಂ ಸೋಮಂ ಜನಾರ್ಧನಂ
ಹಸಂ ನಾರಾಯಣಂ ಕೃಷ್ಣಂ ಜಪತೇ ದುಃಸ್ವಪ್ರಶಾಂತಯೇ
ಮಲಗುವ ಮುನ್ನ ಭಗವಾನ್ ಶ್ರೀಕೃಷ್ಣನ ಕುರಿತಾದ ಈ ಮಂತ್ರವನ್ನು ಹೇಳಿ ಮಲಗಿದರೆ ಕೆಟ್ಟ ಕನಸುಗಳು ಬರುವುದಿಲ್ಲ. ಅದೇ ರೀತಿ ಭಯಾನಕ ಕನಸುಗಳು ಬಾರದಂತೆ ಆಂಜನೇಯ ಸ್ವಾಮಿಯನ್ನು ನೆನೆದು ಮಲಗಿದರೆ ಸುಖವಾದ ಮತ್ತು ಶಾಂತಿಯುತವಾದ ನಿದ್ರೆ ನಿಮ್ಮನ್ನು ಆವರಿಸುವುದು.