Select Your Language

Notifications

webdunia
webdunia
webdunia
webdunia

ದೀಪಾವಳಿ ಸಂದರ್ಭದಲ್ಲಿ ಮನೆಯ ಈ ಜಾಗದಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ

Deepa

Krishnaveni K

ಬೆಂಗಳೂರು , ಬುಧವಾರ, 30 ಅಕ್ಟೋಬರ್ 2024 (08:35 IST)
ಬೆಂಗಳೂರು: ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಮನೆಯ ತುಂಬಾ ದೀಪ ಹಚ್ಚಿ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳುವ ಸಂಭ್ರಮ ನಮ್ಮಲ್ಲಿದೆ. ಆದರೆ ದೀಪವನ್ನು ಮನೆಯ ಯಾವ ಸ್ಥಳಗಳಲ್ಲಿ ತಪ್ಪದೇ ಇಡಲೇಬೇಕು ಎಂದು ನೋಡಿ.

ದೀಪ ಹಚ್ಚಿಡುವುದು ಬೆಳಕಿನ ಸಂಕೇತ. ಅಜ್ಞಾನವನ್ನು ಓಡಿಸಿ ಜ್ಞಾನವನ್ನು ಬರಮಾಡಿಕೊಳ್ಳುವುದರ ಸಂಕೇತ. ಯಾವ ಮನೆಯಲ್ಲಿ ಮುಸ್ಸಂಜೆ ಹೊತ್ತಿನಲ್ಲಿ ದೀಪ ಬೆಳಗುತ್ತದೋ ಆ ಮನೆಗೆ ಲಕ್ಷ್ಮೀ ದೇವಿ ಬರುತ್ತಾಳೆ ಎಂಬ ನಂಬಿಕೆಯಿದೆ. ಆದರೆ ಕೆಲವೊಂದು ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ತಪ್ಪಿಸಲೇಬಾರದು.

ನೀವು ಎಲ್ಲಿ ದೀಪ ಹಚ್ಚುತ್ತೀರೋ ಬಿಡುತ್ತೀರೋ ಆದರೆ ಮನೆಯ ತುಳಸಿ ಕಟ್ಟೆಯ ಮುಂದೆ ತಪ್ಪದೇ ದೀಪ ಹಚ್ಚಿ. ಪ್ರತಿನಿತ್ಯವೂ ತುಳಸಿಯ ಮುಂದೆ ದೀಪ ಹಚ್ಚಿದರೆ ಲಕ್ಷ್ಮೀ ದೇವಿ ಸಂಪ್ರೀತಳಾಗುತ್ತಾಳೆ. ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಮುಂಬಾಗಿಲಿನ ಹೊಸ್ತಿಲುಗಳ ಬಳಿ.

ಲಕ್ಷ್ಮೀ ದೇವಿ ಮುಸ್ಸಂಜೆ ಹೊತ್ತು ಹೊಸ್ತಿಲು ದಾಟಿ ಮನೆಯೊಳಗೆ ಬರುತ್ತಾಳೆ. ಈ ಸಂದರ್ಭದಲ್ಲಿ ಮನೆಯ ದ್ವಾರದ ಬಳಿಯೇ ದೀಪ ಹಚ್ಚಿಟ್ಟರೆ ಅವಳು ಖುಷಿಯಾಗುತ್ತಾಳೆ. ಮನೆಯ ಮುಖ್ಯದ್ವಾರ ಎನ್ನುವುದು ಅತಿಥಿಗಳನ್ನು ಆಹ್ವಾನಿಸುವ ಜಾಗವಾಗಿದೆ. ಅದೇ ರೀತಿ ಲಕ್ಷ್ಮೀ ದೇವಿಯನ್ನು ಆಹ್ವಾನಿಸಬೇಕೆಂದರೆ ಈ ಜಾಗದಲ್ಲಿ ತಪ್ಪದೇ ದೀಪ ಹಚ್ಚಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?