ಬೆಂಗಳೂರು: ಶುಕ್ರವಾರ ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಇಂದು ಲಕ್ಷ್ಮೀ ದೇವಿಯ ಈ ಒಂದು ಸ್ತೋತ್ರ ಓದುವುದರಿಂದ ಸಮೃದ್ಧಿ ಮಾತ್ರವಲ್ಲದೆ ವಿರೋಧಿಗಳನ್ನು ನಿಗ್ರಹಿಸಲೂ ಸಾಧ್ಯವಾಗುತ್ತದೆ.
ಲಕ್ಷ್ಮೀ ದೇವಿಯು ಜೀವನದಲ್ಲಿ ಎಲ್ಲಾ ರೀತಿಯ ಸಂಪತ್ತುಗಳನ್ನು ನೀಡುವವಳು. ಸಂಪತ್ತು ಎಂದರೆ ಕೇವಲ ಹಣಕಾಸಿನ ವಿಚಾರ ಮಾತ್ರವಲ್ಲ. ಸಂಪತ್ತು ಸುಖದ ರೂಪದಲ್ಲಿ ಇರಬಹುದು, ಯಶಸ್ಸಿನ ರೂಪದಲ್ಲಿ ಇರಬಹುದು. ಯಾವುದೇ ರೀತಿಯ ಸುಖ, ಸಮೃದ್ಧಿಗೂ ಲಕ್ಷ್ಮಿಯ ಕೃಪಾಕಟಾಕ್ಷ ಬೇಕೇ ಬೇಕು.
ಲಕ್ಷ್ಮೀ ಕರಾವಲಂಬಂ ಸ್ತೋತ್ರವನ್ನು ಓದುವುದರಿಂದ ವಿರೋಧಿಗಳನ್ನುನಿಗ್ರಹಿಸಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಈ ಸ್ತೋತ್ರದಲ್ಲಿ 17 ಶ್ಲೋಕಗಳಿದ್ದು, ಇದನ್ನು ಓದುವುದರಿಂದ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ. ಮನಸ್ಸಿನ ಚಿಂತೆಗಳು ದೂರವಾಗುತ್ತದೆ.
ಶ್ರೀಮತ್ ಪಯೋನಿಧಿ ನಿಕೇತನ ಚಕ್ರ ಪಾಣೆ
ಭೋಗೀಂದ್ರ ಭೋಗ ಮಣಿ ರಜಿತ ಪುಣ್ಯ ಮೂರ್ತೇ
ಯೋಗೀಶ ಶಾಶ್ವತ ಶರಣ್ಯ ಭಬ್ಧಿ ಪೋತ
ಲಕ್ಷ್ಮೀ ನೃಸಿಂಹ ಮಮ ದೇಹಿ ಕರಾವಲಂಬಮ್
ಎಂದು ಈ ಶ್ಲೋಕದ ಸಾಲುಗಳು ಆರಂಭವಾಗುತ್ತದೆ. ಈ ಸ್ತೋತ್ರವನ್ನು ಪ್ರತಿನಿತ್ಯ ಅಲ್ಲದೇ ಹೋದರೂ ಪ್ರತೀ ಶುಕ್ಲವಾರಗಳಂದು ತಪ್ಪದೇ ಓದಿ.