Select Your Language

Notifications

webdunia
webdunia
webdunia
webdunia

ಮನಸ್ಸಿನ ಭಯ ಹೋಗಲು ಶಿವನ ಈ ಮಂತ್ರವನ್ನು ತಪ್ಪದೇ ಜಪಿಸಿ

Astrology
ಬೆಂಗಳೂರು: ಇಂದು ಸೋಮವಾರವಾಗಿದ್ದು, ಭಗವಾನ್ ಶಿವನಿಗೆ ಅರ್ಪಿತವಾದ ದಿನವಾಗಿದೆ. ಶಿವ ಎಂದರೆ ಭಯನಾಶಕ ಎಂದೇ ನಾವು ನಂಬುತ್ತೇವೆ. ಶಿವನ ಈ ಒಂದು ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿರುವ ಭಯ ದೂರವಾಗುತ್ತದೆ. ಅದು ಯಾವ ಮಂತ್ರ ಇಲ್ಲಿ ನೋಡಿ.

ಎಲ್ಲಕ್ಕಿಂತ ಶ್ರೇಷ್ಠವಾದ ಮಂತ್ರವೆಂದರೆ ಅದು ಗಾಯತ್ರಿ ಮಂತ್ರ. ಶಿವನ ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲೀ ಮಂತ್ರವಾಗಿದೆ. ಪ್ರತಿಯೊಂದು ದೇವರಿಗೂ ಗಾಯತ್ರಿ ಮಂತ್ರವಿದೆ. ಅದೇ ರೀತಿ ಶಿವನ ಗಾಯತ್ರಿ ಮಂತ್ರವೂ ಇದ್ದು ಇದನ್ನು ಓದುವುದರಿಂದ ಮನಸ್ಸಿನಲ್ಲಿರುವ ಭಯ ದೂರವಾಗುತ್ತದೆ. ಶಿವನ ಗಾತ್ರಿ ಮಂತ್ರ ಹೀಗಿದೆ:

ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್

ಈ ಮಂತ್ರವನ್ನು ಕೇವಲ ಸೋಮವಾರ ಎಂದು ಮಾತ್ರವಲ್ಲ, ಪ್ರತಿನಿತ್ಯವೂ ಪಠಿಸುತ್ತಾ ಬಂದಲ್ಲಿ ಮನಸ್ಸಿನಲ್ಲಿರುವ ಭಯ, ಆತಂಕ, ಉದ್ವೇಗ ದೂರವಾಗಿ ಮನಸ್ಸು ಶಾಂತವಾಗುತ್ತದೆ. ಒಂದು ವಿಚಾರದ ಮೇಲೆ ಏಕಾಗ್ರತೆ ಸಾಧಿಸಲು ನೆರವಾಗುತ್ತದೆ. ಮನಸ್ಸು ಜಾಗೃತವಾಗಿ ದೇಹವೂ ಆರಾಮವಾಗುತ್ತದೆ. ಪ್ರತಿನಿತ್ಯ ತಪ್ಪದೇ ಪಠಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?