Publish Date: Sat, 19 Oct 2024 (08:35 IST)
Updated Date: Sat, 19 Oct 2024 (08:38 IST)
ಬೆಂಗಳೂರು: ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಇಂದು ಆಂಜನೇಯ ಸ್ವಾಮಿ ಅಥವಾ ಶನಿ ದೇವನ ಪೂಜೆ ಮಾಡುವುದರಿಂದ ಶನಿ ದೆಸೆಗೆ ಪರಿಹಾರ ಪಡೆಯಬಹುದು. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿ ನಮ್ಮ ಹೆಗಲೇರುತ್ತಾನೆ.
ಶನಿ ದೆಸೆ ಇದ್ದಾಗ ಹಣಕಾಸಿನ ನಷ್ಟ, ಮಾನಸಿಕವಾಗಿ ಚಿಂತೆ, ಕಲಹ, ಉದ್ಯೋಗದಲ್ಲಿ ಹಿನ್ನಡೆ, ಸಂಬಂಧಗಳಲ್ಲಿ ಬಿರುಕು, ದೈಹಿಕ ನೋವುಗಳು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ. ಇದಕ್ಕಾಗಿ ಇಂದು ಭಕ್ತಿಯಿಂದ ಶನಿ ದೇವನ ಪೂಜೆ ಮಾಡುವುದರಿಂದ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.
ಅದಲ್ಲದೇ ಹಣಕಾಸಿನ ವಿಚಾರದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ದುರಾಸೆಯಿಂದ ನಮ್ಮ ಅರ್ಹತೆ ಅಥವಾ ದುಡಿಮೆಗೆ ಮೀರಿ ಇನ್ನೊಬ್ಬರಿಂದ ಹಣ ವಸೂಲಾತಿ ಮಾಡುವುದರಿಂದ ಶನಿಯ ವಕ್ರದೃಷ್ಟಿಗೊಳಗಾಗಬೇಕಾದೀತು.
ಅದೇ ರೀತಿ ರಾತ್ರಿ ಊಟದ ಬಳಿಕ ಹಣಕಾಸಿನ ವ್ಯವಹಾರವಿಟ್ಟುಕೊಳ್ಳುವ ತಪ್ಪು ಮಾಡಬೇಡಿ. ಕಷ್ಟದಲ್ಲಿರುವವರಿಂದ ಹಣ ವಸೂಲಾತಿ ಮಾಡುವುದು, ಇನ್ನೊಬ್ಬರ ದುಡ್ಡಿಗೆ ಕೈ ಹಾಕುವುದರಿಂದ ಶನಿಯ ಅವಕೃಪೆಗೊಳಗಾಗಬೇಕಾದೀತು. ಎಚ್ಚರಿಕೆಯಿರಲಿ.