Select Your Language

Notifications

webdunia
webdunia
webdunia
webdunia

ಗಾಯತ್ರಿ ಮಂತ್ರವನ್ನು ಯಾವ ಸಮಯದಲ್ಲಿ, ಎಷ್ಟು ಬಾರಿ ಪಠಿಸಬೇಕು

Astrology

Krishnaveni K

ಬೆಂಗಳೂರು , ಶನಿವಾರ, 26 ಅಕ್ಟೋಬರ್ 2024 (08:19 IST)
ಬೆಂಗಳೂರು: ಗಾಯತ್ರಿ ಮಂತ್ರ ಎನ್ನುವುದು ಕೇವಲ ತನ್ನೊಬ್ಬನ ಒಳಿತಿಗಾಗಿ ಪಠಿಸುವ ಮಂತ್ರವಲ್ಲ. ಇದನ್ನು ಜಪಿಸುವುದರಿಂದ ಸಕಲರಿಗೂ ಒಳಿತಾಗುತ್ತದೆ. ಗಾಯತ್ರಿ ಮಂತ್ರವನ್ನು ಎಷ್ಟು ಬಾರಿ, ಯಾವ ಸಮಯದಲ್ಲಿ ಪಠಿಸಬೇಕು ಇಲ್ಲಿ ನೋಡಿ.

ಗಾಯತ್ರಿ ಮಂತ್ರವು ಅತ್ಯಂತ ಪರಿಣಾಮಕಾರೀ ಮಂತ್ರಗಳಲ್ಲಿ ಒಂದಾಗಿದ್ದು, ಇದನ್ನು ಪಠಿಸುವುದರಿಂದ ಲೋಕದಲ್ಲಿ ಸಮಸ್ತರೂ ನೆಮ್ಮದಿಯಿಂದಿರುತ್ತಾರೆ. ಅಲ್ಲದೆ, ನಮ್ಮ ಮನಸ್ಸಿನ ಭಾವನೆಗಳು ನಿಯಂತ್ರದಲ್ಲಿರುತ್ತದೆ. ಇದು ಧ್ಯಾನ ಮಂತ್ರವಾಗಿದ್ದು, ಜೀವನದಲ್ಲಿ ಯಶಸ್ಸು ಪಡೆಯುತ್ತೀರಿ.

ಗಾಯತ್ರಿ ಮಂತ್ರ ಹೀಗಿದೆ:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್

ಇದನ್ನು ಪಠಿಸುವುದರಿಂದ ಜೀವನದಲ್ಲಿ ಒಂದು ರೀತಿಯ ಸಕಾರಾತ್ಮಕ ಬದಲಾವಣೆ ಕಾಣಬಹುದು. ಇದು ಸೂರ್ಯನನ್ನು ಕುರಿತಾಗಿ ಮಾಡುವ ಪ್ರಾರ್ಥನೆಯಾಗಿದೆ. ದಿನದಲ್ಲಿ ಮೂರು ಬಾರಿ ಈ ಮಂತ್ರವನ್ನು ಹೇಳಿದರೆ ಸೂಕ್ತ ಎಂದು ಶಾಸ್ತ್ರಗಳು ಹೇಳುತ್ತವೆ. ಬೆಳಿಗ್ಗೆ ಸೂರ್ಯೋದಯದ ಸಂದರ್ಭದಲ್ಲಿ ಮಧ್ಯಾಹ್ನ ಮತ್ತು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು. ಕೈಯಲ್ಲಿ ಜಪಮಾಲೆ ಹಿಡಿದು ಮನಸ್ಸಿನಲ್ಲಿಯೇ ಈ ಮಂತ್ರವನ್ನು ಹೇಳುವುದು ಸರಿಯಾದ ಕ್ರಮವಾಗಿದೆ. ಯಾವಾಗಲೂ ಶಾಂತವಾದ ಪರಿಸರದಲ್ಲಿ ಕುಳಿತು ಗಾಯತ್ರಿ ಮಂತ್ರವನ್ನು ಜಪಿಸಿದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?