Select Your Language

Notifications

webdunia
webdunia
webdunia
webdunia

ಹಲ್ಲಿ ಲೊಚಗುಟ್ಟುವುದರಿಂದ ಶುಭವಾಗುತ್ತದಾ

Astrology

Krishnaveni K

ಬೆಂಗಳೂರು , ಸೋಮವಾರ, 4 ನವೆಂಬರ್ 2024 (08:36 IST)
ಬೆಂಗಳೂರು: ನಾವು ಏನೋ ಮನಸ್ಸಿನಲ್ಲಿ ಅಥವಾ ಮಾತಿನಲ್ಲಿ ಹೇಳುವಾಗ ಹಲ್ಲಿ ಲೊಚಗುಟ್ಟಿದರೆ ಅದು ನಿಜವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಲ್ಲಿ ಲೊಚಗುಟ್ಟಿದರೆ ನಿಜವಾಗಿಯೂ ಶುಭ ಸೂಚನೆಯಾ? ಇಲ್ಲಿದೆ ವಿವರ.

ಸರ್ಪಗಳ ಜಾತಿಗೆ ಸೇರಿದ ಹಲ್ಲಿ ಕೆಲವೊಮ್ಮೆ ನಮಗೆ ಒಳಿತು ಮಾಡುತ್ತದೆ, ಇನ್ನು ಕೆಲವೊಮ್ಮೆ ಕೆಡುಕಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಲ್ಲಿ ನೆತ್ತಿಯ ಮೇಲೆ ಬಿದ್ದರೆ ಮರಣ, ಮುಖದ ಮೇಲೆ ಬಿದ್ದರೆ ಅತಿಥಿಗಳು ಬರುತ್ತಾರೆ ಎಂಬಿತ್ಯಾದಿ ನಂಬಿಕೆಗಳು ಹಿಂದೂ ಧರ್ಮದಲ್ಲಿದೆ.

ಹಲ್ಲಿ ಲೊಚಗುಟ್ಟಿದರೆ ನಾವು ಅಂದುಕೊಂಡಿದ್ದು ನಿಜವಾಗುತ್ತದೆ ಎನ್ನಲಾಗುತ್ತದೆ. ಆದರೆ ಯಾವ ದಿಕ್ಕಿನಲ್ಲಿ ಮತ್ತು ಯಾವ ವಾರದಲ್ಲಿ ಕೂತು ಲೊಚಗುಟ್ಟಿದೆ ಎನ್ನುವುದೂ ಮುಖ್ಯವಾಗುತ್ತದೆ. ವಿಶೇಷವಾಗಿ ಮಂಗಳವಾರ ಹಲ್ಲಿ ಲೊಚಗುಟ್ಟಿದರೆ ಅನೇಕ ಲಾಭಗಳಿವೆ ಎಂಬ ನಂಬಿಕೆಯಿದೆ.

ಮಂಗಳವಾರದಂದು ಪೂರ್ವ ದಿಕ್ಕಿನಲ್ಲಿ ಕೂತು ಹಲ್ಲಿ ಲೊಚಗುಟ್ಟಿದರೆ ಸಮೃದ್ಧಿಯಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಕೂತು ಲೊಚಗುಟ್ಟುವುದರಿಂದ ಅತಿಥಿಗಳ ಭೇಟಿಯಾಗುತ್ತದೆ. ಪಶ್ಚಿಮದಲ್ಲಿ ಕೂತು ಲೊಚಗುಟ್ಟಿದರೆ ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಈಶಾನ್ಯ ಭಾಗದಲ್ಲಿ ಕೂತು ಕೂಗಿದರೆ ವಾಹನ ಖರೀದಿ ಯೋಗವಿದೆ. ನೆಲದಲ್ಲಿ ಲೊಚಗುಟ್ಟಿದರೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?