Select Your Language

Notifications

webdunia
webdunia
webdunia
webdunia

ಯಾವ ದೇವರಿಗೆ ಯಾವ ಎಣ್ಣೆಯಿಂದ ದೀಪ ಬೆಳಗಬೇಕು ಇಲ್ಲಿ ನೋಡಿ

Astrology

Krishnaveni K

ಬೆಂಗಳೂರು , ಗುರುವಾರ, 7 ನವೆಂಬರ್ 2024 (08:40 IST)
ಬೆಂಗಳೂರು: ದೇವರ ದೀಪ ಹಚ್ಚುವಾಗ ಯಾವ ಎಣ್ಣೆ ಬಳಸಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲಗಳಿರುತ್ತವೆ. ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು ಎಂದು ಇಲ್ಲಿ ನೋಡಿ.

ಶನಿ ದೇವರ ಪೂಜೆ ಸಂದರ್ಭದಲ್ಲಿ ದೀಪಕ್ಕೆ ಎಳ್ಳೆಣ್ಣೆ ಹಾಕುವುದು ಕಡ್ಡಾಯ. ಎಳ್ಳೆಣ್ಣೆಯ ದೀಪ ಹಚ್ಚುವುದರಿಂದ ಶನಿ ದೋಷಗಳು ನಿವಾರಣೆಯಾಗುತ್ತವೆ. ಈ ಕಾರಣಕ್ಕೆ ಎಳ್ಳೆಣ್ಣೆಯ ದೀಪ ಹಚ್ಚಬೇಕು. ಇನ್ನು ಆದಿಪರಾಶಕ್ತಿಯ ಪೂಜೆ ಮಾಡುವಾಗ ಬೇವಿನ ಎಣ್ಣೆ ಹಚ್ಚುವುದು ಸೂಕ್ತ.

ಆದಿ ಪೂಜಿತ ಗಣೇಶ ತೆಂಗಿನಕಾಯಿ ಫಲ ವಸ್ತುಗಳ ಪ್ರಿಯ. ಆತನಿಗೆ ಕೊಬ್ಬರಿ ಎಣ್ಣೆ ಹಾಕಿದ ದೀಪ ಬಳಸಿ ಪೂಜೆ ಮಾಡುವುದು ಸೂಕ್ತ. ಗಣೇಶನಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಮನೆಯಲ್ಲಿ ಶಾಂತಿ, ಸಮಾಧಾನವಿರುತ್ತದೆ. ಇನ್ನು, ವಿಷ್ಣು, ಲಕ್ಷ್ಮಿಯ ಪೂಜೆಯಲ್ಲಿ ಶುದ್ಧ ಹಸುವಿನ ತುಪ್ಪ ಬಳಸಿದ ದೀಪ ಹಚ್ಚಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

ಇನ್ನು ಶಿವನ ಅಂಶವಾದ ಭೈರವನ ಪೂಜೆ ಮಾಡುವಾಗ ಪಂಚದೀಪ ತೈಲ ಹಾಕಿದ ದೀಪ ಹಚ್ಚುವುದು ಸೂಕ್ತ. ಇದರಿಂದ ಮನೆಯಲ್ಲಿ ದೈಹಿಕ, ಮಾನಸಿಕ ಅನಾರೋಗ್ಯ, ಅಶಾಂತಿಗಳು ದೂರವಾಗಿ ಸಮೃದ್ಧಿ ನೆಲೆಸುತ್ತದೆ. ಆರೋಗ್ಯ ಸಮಸ್ಯೆ ದೂರ ಮಾಡಲು ಭೈರವನ ಪೂಜೆ ಮಾಡುವುದು ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?