Select Your Language

Notifications

webdunia
webdunia
webdunia
webdunia

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

Ganesha
ಬೆಂಗಳೂರು: ಇಂದು ಬುಧವಾರವಾಗಿದ್ದು ವಿಘ್ನ ವಿನಾಶಕ ಗಣೇಶನ  ವಾರವಾಗಿದೆ. ಇಂದು ಗಣಪತಿಯ ಕುರಿತಾಗಿ ಕಾರ್ಯ ಸಿದ್ಧಿ ಗಣಪತಿಯ ಮಂತ್ರ ಪಠಿಸುವುದರಿಂದ ನಾವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ನಾವು ಮಾಡುವ ಕೆಲಸಗಳಲ್ಲಿ ಸಫಲತೆ ಕಾಣಬೇಕಾದರೆ, ಯಾವುದೇ ವಿಘ್ನಗಳೂ ಬಾರದೇ ಮುಂದುವರಿಯಬೇಕಾದರೆ ಗಣಪತಿಯ ಆಶೀರ್ವಾದ ಬೇಕೇ ಬೇಕು. ವಿಶೇಷವಾಗಿ ಬುಧವಾರಗಳಂದು ಮಡಿ ಸ್ನಾನ ಮಾಡಿ ಶುದ್ಧ ಮನಸ್ಸಿನಿಂದ ಗಣೇಶನ ಕಾರ್ಯ ಸಿದ್ಧಿ ಮಂತ್ರ ಹೇಳುವುದರಿಂದ ನಾವು ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಕಾರ್ಯ ಸಿದ್ಧಿ ಮಂತ್ರ ಹೀಗಿದೆ:
ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವಾ ವಿಘ್ನ ಪ್ರಶಮ್ನಾಯ ಸರ್ವರ್ಜಯ
ವಶ್ಯಕರ್ಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂ ಓಂ ಸ್ವಾಹಾ

ಬುಧವಾರಗಳಂದು ವಿಶೇಷವಾಗಿ ಗಣೇಶನನ್ನು ಈ ಮಂತ್ರದಿಂದ ಪೂಜಿಸಿದಲ್ಲಿ ನಾವು ಮಾಡುವಂತಹ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ. ಒಂದು  ವೇಳೆ ಅಡೆತಡೆಗಳಿದ್ದರೂ ಅದು ನಿವಾರಣೆಯಾಗಿ ನಮ್ಮ ಹಾದಿ ಸುಗಮವಾಗವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?