ನಾಳೆ ತುಳಸಿ ಹಬ್ಬ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷವಾದ ಸ್ಥಾನವಿದ್ದು, ತುಳಸಿ ಪೂಜೆ ಮಾಡುವಾಗ ಈ ಮಂತ್ರವನ್ನು ತಪ್ಪದೇ ಜಪಿಸಿ. ಇದರಿಂದ ಜೀವನದಲ್ಲಿ ಅದೃಷ್ಟ ಬರುತ್ತದೆ ಎನ್ನುವ ನಂಬಿಕೆಯಿದೆ.
ಪ್ರತಿಯೊಬ್ಬರ ಮನೆ ಮುಂದೆಯೂ ತುಳಸಿ ಕಟ್ಟೆ ಇದ್ದೇ ಇರುತ್ತದೆ. ತುಳಸಿ ಗಿಡದ ಮುಂದೆ ನೆಲ್ಲಿಕಾಯಿ ದೀಪವಿಟ್ಟು, ಅರಿಶಿನ, ಕುಂಕುಮ ಹಚ್ಚಿ ಸಿಂಪಲ್ ಆಗಿ ಪೂಜೆ ಮಾಡಬಹುದು. ತುಳಸಿ ಗಿಡಕ್ಕೆ ಆರತಿ ಬೆಳಗುವಾಗ ಈ ಒಂದು ಮಂತ್ರವನ್ನು ಜಪಿಸಿ.
ಓಂ ತುಳಸಿದೇವೈ ಚ ವಿದ್ಮಹೇ
ವಿಷ್ಣುಪ್ರಿಯಾಯೈ ಚ ಧೀಮಹೀ
ತನ್ನೋ ವೃಂದಾ ಪ್ರಚೋದಯಾತ್
ಈ ಮಂತ್ರವನ್ನು ಪಠಿಸುತ್ತಾ ತುಳಸಿ ಪೂಜೆ ಮಾಡುವುದರಿಂದ ಲಕ್ಷ್ಮೀ, ಮಹಾವಿಷ್ಣುವಿನ ಪ್ರೀತಿಗೆ ಪಾತ್ರರಾಗುತ್ತೀರಿ. ಇದರಿಂದ ಮನೆಯಲ್ಲಿ ಐಶ್ವರ್ಯಾಭಿವೃದ್ಧಿ ಮತ್ತು ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ.