ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಗ್ರಹಗಳ ದೋಷದಿಂದ ಸಂಕಷ್ಟ ಅನುಭವಿಸುತ್ತಾರೆ. ಎಲ್ಲಾ ಗ್ರಹ ದೋಷಗಳ ನಿವಾರಣೆಗೂ ಈ ಒಂದು ಮಂತ್ರವನ್ನು ತಪ್ಪದೇ ಓದಿ.
ಗ್ರಹ ದೋಷಗಳಿಂದಾಗಿ ಆರೋಗ್ಯ, ಆಯುಷ್ಯ, ಐಶ್ವರ್ಯ, ನೆಮ್ಮದಿ, ದಾಂಪತ್ಯದಲ್ಲಿ ಬಿರುಕು ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು. ಒಂದೊಂದು ಗ್ರಹ ದೋಷಗಳ ಪರಿಣಾಮ ಒಂದೊಂದು ರೀತಿಯಲ್ಲಿರುತ್ತದೆ.
ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಾ ಹೋಗಬೇಕೆಂದರೆ ಗ್ರಹಗತಿಗಳು ಅನುಕೂಲಕರವಾಗಿರುವುದು ಮುಖ್ಯವಾಗಿರುತ್ತದೆ. ಹೀಗಾಗಿ ಯಾವುದೇ ಗ್ರಹ ದೋಷಗಳಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಒಂದು ಮಂತ್ರವನ್ನು ಜಪಿಸಿ.
ಆರೋಗ್ಯಂ ಪ್ರದದಾತು ನೋ ದಿನಕರಃ ಚಂದ್ರೋ ಯಶೋ ನಿರ್ಮಲಂ
ಭೂತಿಂ ಭೂಮಿಸುತಃ ಸುಧಾಂಶುತನಯಃ ಪ್ರಜ್ಞಾಂ ಗುರುರ್ಗೌರವಮ್ |
ಕಾವ್ಯಃ ಕೋಮಲವಾಗ್ವಿಲಾಸಮತುಲಾಂ ಮಂದೋ ಮುದಂ ಸರ್ವದಾ
ರಾಹುರ್ಬಾಹುಬಲಂ ವಿರೋಧಶಮನಂ ಕೇತುಃ ಕುಲಸ್ಯೋನ್ನತಿಮ್ ||