Select Your Language

Notifications

webdunia
webdunia
webdunia
webdunia

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

Tulsi festival

Krishnaveni K

ಬೆಂಗಳೂರು , ಶುಕ್ರವಾರ, 31 ಅಕ್ಟೋಬರ್ 2025 (10:55 IST)
ದೀಪಾವಳಿ ಬಳಿಕ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬವೆಂದರೆ ತುಳಸಿ ಹಬ್ಬ. ಈ ಬಾರಿ ನವಂಬರ್ 2 ರಂದು ತುಳಸಿ ಹಬ್ಬ ಬರುತ್ತದೆ. ತುಳಸಿ ಹಬ್ಬದ ಪೂಜಾ ಸಮಯ, ಶುಭ ಮುಹೂರ್ತ ಇತ್ಯಾದಿ ವಿವರ ಇಲ್ಲಿದೆ ನೋಡಿ.

ಹಿಂದೂ ಧರ್ಮದಲ್ಲಿ ತುಳಸಿ ಪೂಜ್ಯನೀಯ ಗಿಡವಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಪ್ರತಿನಿತ್ಯ ತುಳಸಿ ಪೂಜೆ ಮಾಡುವುದರಿಂದ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬ ನಂಬಿಕೆಯಿದೆ. ತುಳಸಿ ಗಿಡದಲ್ಲಿ ಲಕ್ಷ್ಮೀ, ಮಹಾವಿಷ್ಣು ನೆಲೆಸಿರುತ್ತಾರೆ. ಈ ಕಾರಣಕ್ಕೆ ಹಿಂದೂಗಳ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ.

ತುಳಸಿ ಪೂಜಾ ಸಮಯ
ತುಳಸಿ ಹಬ್ಬದಂದು ತುಳಸಿ ಗಿಡಕ್ಕೆ ಎರಡು ಬಾರಿ ಪೂಜೆ ಮಾಡಬಹುದು. ಬೆಳಿಗ್ಗೆ 5 ಗಂಟೆಯಿಂದ 5.45 ರೊಳಗೆ ಪೂಜೆ ಮಾಡಬೇಕು. ಸಂಜೆ ಸೂರ್ಯ ಮುಳುಗುವ ಹೊತ್ತು ಅಂದರೆ 6.45 ರಿಂದ 8.40 ರೊಳಗೆ ಪೂಜೆ ಮಾಡುವುದು ಶ್ರೇಯಸ್ಕರವಾಗಿದೆ.

ಪೂಜಾ ವಿಧಾನ
ತುಳಸಿ ಗಿಡದ ಮುಂದೆ ದೀಪ ಹಚ್ಚಿ, ಅಕ್ಕಿಯೇತರ ವಸ್ತುವಿನಿಂದ ತಯಾರಿಸಿದ ಸಿಹಿ ತಿನಿಸನ್ನು ನೈವೇದ್ಯವಾಗಿ ಇಡಬೇಕು. ತುಳಸಿ ಗಿಡದ ಕಟ್ಟೆಗೆ ಅರಿಶಿನ, ಕುಂಕುಮ ಹಚ್ಚಬೇಕು. ತುಳಸಿ ಗಿಡದ ಮುಂದೆ ನೆಲ್ಲಿಕಾಯಿಯ ತುಪ್ಪದ ದೀಪ ಹಚ್ಚಿಡಬೇಕು. ಈ ದಿನ ಮುತ್ತೈದೆಯರಿಗೆ ಅರಿಶಿನ, ಕುಂಕುಮ ಕೊಟ್ಟು ಆಶೀರ್ವಾದ ಪಡೆದರೆ ಶ್ರೇಯಸ್ಕರ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ