Publish Date: Sat, 20 Dec 2025 (13:32 IST)
Updated Date: Sat, 20 Dec 2025 (13:35 IST)
2026 ಕ್ಕೆ ಮದುವೆಯಾಗಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ 2026 ರ ವರ್ಷ ಭವಿಷ್ಯ ಪ್ರಕಾರ ಯಾರಿಗೆಲ್ಲಾ ಈ ವರ್ಷ ಮದುವೆಯಾಗುವ ಯೋಗವಿದೆ ಇಲ್ಲಿದೆ ನೋಡಿ ವಿವರ.
ಜ್ಯೋತಿಷ್ಯದ ಪ್ರಕಾರ ಈ ವರ್ಷ ಒಟ್ಟು ಐದು ರಾಶಿಯವರಿಗೆ ಮದುವೆಯಾಗುವ ಯೋಗ ಹೆಚ್ಚಿದೆ. ಉಳಿದ ರಾಶಿಯವರಿಗೆ ಸಾಧಾರಣ ಯೋಗವಿದೆಯಷ್ಟೇ. ಆ ಐದು ರಾಶಿಗಳು ಯಾವುವು ಮತ್ತು ಯಾವ ಸಮಯಕ್ಕೆ ಮದುವೆಯಾಗುತ್ತದೆ ನೋಡಿ.
ವೃಷಭ ರಾಶಿ: ಈ ರಾಶಿಯವರಿಗೆ ಈ ವರ್ಷ ಗುರುವು 2 ರಿಂದ 3 ನೇ ಮನೆಗೆ ಕಾಲಿಡುತ್ತಿದ್ದು ಮದುವೆಯ ಯೋಗ ಹೆಚ್ಚಾಗಿದೆ. ಅದರಲ್ಲೂ ಜನವರಿಯಿಂದ ಜೂನ್ ಮಧ್ಯದಲ್ಲಿ ಮದುವೆಯಾಗಬಹುದು.
ಕರ್ಕಟಕ ರಾಶಿ: ಈ ರಾಶಿಯವರಿಗೆ ಈ ವರ್ಷ ಜೂನ್ ನಿಂದ ಗುರು ಬಲ ಒದಗಿಬರುವುದು. ಹೀಗಾಗಿ ಜೂನ್ ನಂತರ ವಿವಾಹ ಯೋಗವಿದೆ. ಕುಟುಂಬದ ಸಮ್ಮತಿಯೊಂದಿಗೆ ಬಹುದಿನಗಳ ಗೆಳೆಯ/ಗೆಳತಿಯನ್ನೇ ಮದುವೆಯಾಗುವ ಸಾಧ್ಯತೆಯಿದೆ.
ಕನ್ಯಾ ರಾಶಿ: ಏಳನೇ ಮನೆಯಲ್ಲಿ ಗುರು ಇದ್ದು, ಈ ವರ್ಷ ಮದುವೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಮದುವೆಯಾಗಬಹುದು. ವಿಶೇಷವಾಗಿ ಅರೇಂಜ್ಡ್ ಮದುವೆಯಾಗಬಹುದು.
ಮಕರ ರಾಶಿ: ಶನಿ ನಿಮ್ಮ ಆಳುವ ರಾಶಿಯಾಗಿದ್ದರೂ ಗುರು ಬಲವೂ ಜೊತೆಯಾಗುವುದರಿಂದ ಮದುವೆ ಯೋಗವಿದೆ. ವರ್ಷದ ಮೊದಲಾರ್ಧದಲ್ಲೇ ಮದುವೆ ಯೋಗವಿದೆ. ನಿಮ್ಮ ವೃತ್ತಿಗೆ ಸಂಬಂಧಪಟ್ಟವರನ್ನೇ ಮದುವೆಯಾಗಲಿದ್ದೀರಿ.
ಮೀನ ರಾಶಿ: ಶನಿಯು ಪರಿವರ್ತನೆಯ ಕಾಲದಲ್ಲಿದ್ದು, ಗುರುವಿನ ಬಲವೂ ಇರುವುದರಿಂದ ಮದುವೆ ಯೋಗವಿದೆ. ಮಾರ್ಚ್ ನಿಂದ ಆಗಸ್ಟ್ ತಿಂಗಳ ನಡುವೆ ಮದುವೆಯಾಗಬಹುದು.