Publish Date: Wed, 17 Dec 2025 (08:37 IST)
Updated Date: Wed, 17 Dec 2025 (08:42 IST)
2026 ರಲ್ಲೂ ಕೆಲವು ರಾಶಿಯವರಿಗೆ ಶನಿ ದೆಸೆಯ ಪ್ರಭಾವ ಕಂಡುಬರಬಹುದು ಎಂದು ಈ ವರ್ಷದ ರಾಶಿಫಲ ಹೇಳುತ್ತದೆ. 2026 ರಲ್ಲಿ ಯಾವೆಲ್ಲಾ ರಾಶಿಯವರಿಗೆ ಶನಿ ದೋಷವಿರಲಿದೆ ಇಲ್ಲಿದೆ ವಿವರ.
ಕಳೆದ ವರ್ಷ ಮಾರ್ಚ್ ನಿಂದ ಮೂರು ರಾಶಿಗಳಿಗೆ ಶನಿಯ ಪ್ರಭಾವ ಆರಂಭವಾಗಿದೆ. ಈ ಮೂರು ರಾಶಿಗಳೆಂದರೆ ಮೇಷ, ಕುಂಭ ಮತ್ತು ಮೀನ ರಾಶಿ. ಆದರೆ ಎಲ್ಲಾ ರಾಶಿಯವರಿಗೂ ಒಂದೇ ರೀತಿಯ ಫಲವಿರುವುದಿಲ್ಲ.
ಮೇಷ ರಾಶಿ: ಈ ರಾಶಿಯವರಿಗೆ ಕಳೆದ ವರ್ಷ ಮಾರ್ಚ್ ನಿಂದ ಸಾಡೇ ಸಾತ್ ಶನಿ ದೆಸೆ ಆರಂಭವಾಗಿದೆ. ಇದು ಏಳೂವರೆ ವರ್ಷಗಳ ಆವೃತ್ತ ಹೊಂದಿದೆ. ಇದೀಗ ಆರಂಭದ ಚರಣದಲ್ಲಿದೆ. ಈ ಆರಂಭಿಕ ಹಂತದಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ವೇದನೆಗಳು, ಸಂಬಂಧಗಳಲ್ಲಿ ವೈಮನಸ್ಯಗಳು, ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬರಲಿದೆ.
ಮೀನ ರಾಶಿ: ಈ ರಾಶಿಯವರಿಗೆ ಶನಿ ಮಧ್ಯಾವಧಿಯಲ್ಲಿರುತ್ತಾನೆ. ಇದು ತುಂಬಾ ಸವಾಲಿನ ಸಮಯವಾಗಿದೆ. ಕೆಲಸದಲ್ಲಿ ಸಾಕಷ್ಟು ಅಡೆತಡೆಗಳು ತೊಂದರೆಗಳನ್ನು ಎದುರಿಸಲಿದ್ದೀರಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಮಾನಸಿಕ ಒತ್ತಡ ಕಂಡುಬರಬಹುದು.
ಕುಂಭ ರಾಶಿ: ಈ ರಾಶಿಯವರಿಗೆ ಶನಿ ಈ ವರ್ಷ ಕೊನೆಯ ಚರಣದಲ್ಲಿರುತ್ತಾನೆ. ಅಂತಿಮ ಚರಣದಲ್ಲಿ ಶುಭ ಫಲಗಳನ್ನು ಕಾಣುವಿರಿ. ಸಂಬಂಧಗಳು ಸುಧಾರಣೆಯಾಗಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವ ಲಕ್ಷಣಗಳು ಕಂಡುಬರಲಿದೆ. ಏಳೂವರೆ ಶನಿ ಮುಕ್ತಾಯದ ನೆಮ್ಮದಿ ಕಂಡುಬರುವುದು.