Select Your Language

Notifications

webdunia
webdunia
webdunia
webdunia

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

Astrology

Krishnaveni K

ಬೆಂಗಳೂರು , ಶುಕ್ರವಾರ, 19 ಡಿಸೆಂಬರ್ 2025 (08:46 IST)
2026 ರಲ್ಲಿ ಎಲ್ಲಾ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆಯೇ? ದ್ವಾದಶ ರಾಶಿಯವರ 2026 ರ ಹಣಕಾಸಿನ ಸ್ಥಿತಿಗತಿ ಹೇಗಿರಲಿದೆ ಇಲ್ಲಿದೆ ವಿವರ.

ಮೇಷ ರಾಶಿ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದಲಿದ್ದೀರಿ. ಹೊಸ ಉದ್ದಿಮೆ, ಡಿಜಿಟಲ್ ಉದ್ಯಮ ಕೈ ಹಿಡುವುದು.
ವೃಷಭ ರಾಶಿ: ಆರ್ಥಿಕವಾಗಿ ಸ್ಥಿರತೆ, ಆಸ್ತಿ ವಿಚಾರಗಳಲ್ಲಿ ಮುನ್ನಡೆ ಕಂಡುಬರಲಿದೆ.
ಮಿಥುನ ರಾಶಿ: ದೀರ್ಘಕಾಲದ ಯೋಜನೆಗಳು ನಿಮಗೆ ಆರ್ಥಿಕವಾಗಿ ಲಾಭದಾಯಕವಾಗಿರಲಿದೆ. ಹಣ ಗಳಿಸುವ ಸಾಮರ್ಥ್ಯ ಹೆಚ್ಚಾಗಲಿದೆ.
ಕರ್ಕಟಕ: ಹಣ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಹೂಡಿಕೆಗಳಿಂದ ಲಾಭ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸೂಚನೆಯಿದೆ.
ಸಿಂಹ ರಾಶಿ: ಸಹಭಾಗಿತ್ವದ ಯೋಜನೆಗಳಿಂದ ಹಣ ಗಳಿಸಲಿದ್ದೀರಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಪ್ರತಿಷ್ಠೆಗೆ ಅವಕಾಶ ಕೊಡಬೇಡಿ.
ಕನ್ಯಾ ರಾಶಿ: ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಪ್ರಮೋಷನ್ ಅವಕಾಶವಿದ್ದರೂ ಅಡೆತಡೆಗಳು ಬಂದೀತು.
ತುಲಾ: ರಾಶಿ: ಕಳೆದ ವರ್ಷ ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಉದ್ದಿಮೆಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ.
ವೃಶ್ಚಿಕ ರಾಶಿ: ಹಣ ಅಷ್ಟು ಸುಲಭವಾಗಿ ಸಿಗದು. ಸಾಕಷ್ಟು ಯೋಚಿಸಿ ಕೈಗೊಳ್ಳುವ ಯೋಜನೆಗಳು ಕೈ ಹಿಡಿಯಲಿದೆ.
ಧನು ರಾಶಿ: ಸಾಲಗಳನ್ನು ತೀರಿಸಲು ಉತ್ತಮ ಅವಕಾಶಗಳು ಸಿಗಲಿವೆ. ಸಹಭಾಗಿತ್ವದ ಯೋಜನೆಗಳಿಂದ ಲಾಭವಾಗಲಿದೆ.
ಮಕರ ರಾಶಿ: ವಿದೇಶೀ ಹೂಡಿಕೆಗಳಿಂದ ಯಶಸ್ಸು ಗಳಿಸಲಿದ್ದೀರಿ. ಆದರೆ ವರ್ಷಾಂತ್ಯಕ್ಕೆ ಸಾಲ ಮಾಡುವ ಅಪಾಯ ಮೈಮೇಲೆಳೆದುಕೊಳ್ಳಬೇಡಿ.
ಕುಂಭ ರಾಶಿ: ಅನಿರೀಕ್ಷಿತ ಧನಗಳಿಕೆಯ ಮಾರ್ಗಗಳು ಸಿಗಲಿವೆ. ಇದನ್ನು ಲಾಭದಾಯಕವಾಗಿ ಹೂಡಿಕೆ ಮಾಡಲು ಚಿಂತನೆ ನಡೆಸಲಿದ್ದೀರಿ.
ಮೀನ ರಾಶಿ: ಶನಿ ದೋಷವಿದ್ದರೂ ಈ ವರ್ಷ ಆರ್ಥಿಕವಾಗಿ ಸಮಸ್ಯೆಯಾಗಲ್ಲ. ಆದರೆ ದಿಡೀರ್ ಶ್ರೀಮಂತರಾಗುವ ಯೋಜನೆಗಳಿಗೆ ಮರುಳಾಗಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ