Publish Date: Tue, 08 Oct 2019 (07:55 IST)
Updated Date: Tue, 08 Oct 2019 (07:57 IST)
ಬೆಂಗಳೂರು : ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಎಷ್ಟು ಓದಿದರೂ ಅವರಿಗೆ ನೆನಪಿನಲ್ಲಿ ಉಳಿಯುವುದಿಲ್ಲ. ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹ ಸಾಧ್ಯವಾಗುವುದಿಲ್ಲ. ನಿಮ್ಮ ಮಕ್ಕಳ ಈ ಸಮಸ್ಯೆ ಹೋಗಲಾಡಿಸಲು ಗಣೇಶ ರುದ್ರಾಕ್ಷಿಯಿಂದ ಪರಿಹಾರ ಕಂಡುಕೊಳ್ಳಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಬುಧಗ್ರಹ ಅನುಕೂಲಕರವಾಗಿದ್ದರೆ ಮಕ್ಕಳು ಬುದ್ದಿವಂತರಾಗಿರುತ್ತಾರೆ. ಆದ್ದರಿಂದ ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದರೆ ಬುಧಗ್ರಹವು ಅನುಕೂಲವಾಗುವ ಫಲ ನೀಡುತ್ತದೆ. ಇದರಿಂದ ಏಕಾಗ್ರತೆ, ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ.
ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲು ಅಥವಾ ಗೋ ಮೂತ್ರದಿಂದ ರುದ್ರಾಕ್ಷಿಯನ್ನು ಸ್ವಚ್ಛಗೊಳಿಸಬೇಕು. ನಂತರ ಪೂಜೆ ಮಾಡಬೇಕು. ಅದನ್ನು ಹಸಿರು ಬಣ್ಣದ ದಾರದಲ್ಲಿ ಪೋಣಿಸಿ ಹಾಕಿಕೊಳ್ಳಬೇಕು. ಯಾವ ತಿಂಗಳಲ್ಲಿಯಾದರೂ ಸರಿ ಶುಕ್ಲ ಪಕ್ಷದಲ್ಲಿ ಸರಸ್ವತಿ ಯೋಗ ಬಂದ ಬುಧವಾರದ ದಿನವೇ ಈ ರುದ್ರಾಕ್ಷಿಯನ್ನು ಧರಿಸಬೇಕು.