ಬೆಂಗಳೂರು: ಕಾಳಭೈರವ ಎಂದರೆ ಭಗವಾನ್ ಶಿವನ ಭಯಂಕರ ರೂಪ. ಶಿವನ ಮತ್ತೊಂದು ರೂಪವಾದ ಕಾಲಭೈರವೇಶ್ವರನ ಸ್ತೋತ್ರ ಓದುವುದರಿಂದ ನಮಗೆ ಸಿಗುವ ಪ್ರಯೋಜನಗಳೇನು ಎಂಬ ವಿವರ ಇಲ್ಲಿದೆ ನೋಡಿ.
ಕಾಲಭೈರವೇಶ್ವರನನ್ನು ಪಂಚಭೂತಗಳ ಅಧಿಪತಿ ಎಂದು ತಿಳಿಯಲಾಗಿದೆ. ಕಾಳಭೈರವ ಅಹಂಕಾರವನ್ನು ಮೆಟ್ಟಿ, ನಮಗೆ ಸಂಪತ್ತು, ಸುಖ ಸಮೃದ್ಧಿ ಕರುಣಿಸುತ್ತಾನೆ. ಕಾಲಭೈರವೇಶ್ವರನ ಗಾಯತ್ರಿ ಮಂತ್ರ ಹೀಗಿದೆ:
ಓಂ ಕಾಲಾ ಕಾಲಾಯ ವಿದ್ಮಹೇ
ಕಾಲಾತೀತಾಯ ಧೀಮಹೀ
ತನ್ನೋ ಕಾಲಭೈರವ ಪ್ರಚೋದಯಾತ್
ಕಾಲಭೈರವೇಶ್ವರ ಪಶ್ಚಿಮಾಭಿಮುಖವಾಗಿ ನಿಂತಿರುತ್ತಾನೆ. ಅವನಿಗೆ ನಾಲ್ಕು ತೋಳುಗಳಿರುತ್ತವೆ. ಬಾಹ್ಯವಾಗಿ ನೋಡುವಾಗ ಭಯಂಕರ ರೂಪಿಯಾಗಿರುತ್ತಾನೆ. ಆದರೆ ಒಲಿದು ಬಂದ ಭಕ್ತರಿಗೆ ಸುಖ, ಶಾಂತಿಯನ್ನು ನೀಡುವ ಕರುಣಾಮಯಿಯಾಗಿರುತ್ತಾನೆ. ಕಾಲಭೈರವನನ್ನು ಸಂಜೆಯ ಹೊತ್ತು ಪೂಜೆ ಮಾಡಲು ಯೋಗ್ಯ ಸಮಯವಾಗಿದೆ. ಕಾಲಭೈರವನ ವಾಹನ ನಾಯಿಯಾಗಿದ್ದು, ಅವನನ್ನು ಒಲಿಸಿಕೊಳ್ಳಲು ಶ್ವಾನಗಳಿಗೆ ಆಹಾರ ನೀಡುವುದು ಸುಲಭ ದಾರಿಯಾಗಿದೆ.
ಕಾಲಭೈರವನ ಗಾಯತ್ರಿ ಮಂತ್ರ ಪಠಿಸುವುದರಿಂದ ದುಃಖ, ದುರಾಸೆ, ಅಸಹನೆ, ನಷ್ಟ ಹೋಗಲಾಡಿಸಬಹುದಾಗಿದೆ. ಆರೋಗ್ಯ ಸುಧಾರಣೆಯಾಗಲು, ಜೀವಿತಾವಧಿಯನ್ನು ಹೆಚ್ಚಿಸಲು ಕಾಲಭೈರವನ ಗಾಯತ್ರಿ ಮಂತ್ರ ಪಠಿಸಬೇಕು. ಅಲ್ಲದೆ ಇದನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು ದೂರವಾಗುತ್ತದೆ. ಮುಖ್ಯ ಮನೋನಿಗ್ರಹ ಮಾಡಲು ಈ ಮಂತ್ರವನ್ನು ಪಠಿಸುವುದು ಉತ್ತಮ.