Select Your Language

Notifications

webdunia
webdunia
webdunia
webdunia

ಲಕ್ಷ್ಮೀ ದೇವಿಯು ಸದಾ ಮಹಾವಿಷ್ಣುವಿನ ಪಾದದ ಬಳಿಯೇ ಇರುತ್ತಾಳೆ ಯಾಕೆ

Lord Vishnu

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (08:44 IST)
ಬೆಂಗಳೂರು: ಲಕ್ಷ್ಮೀ ಸಮೇತ ಮಹಾವಿಷ್ಣುವಿನ ಚಿತ್ರಗಳನ್ನು ನೋಡುವಾಗಲೆಲ್ಲಾ ಲಕ್ಷ್ಮೀ ದೇವಿಯು ವಿಷ್ಣುವಿನ ಪಾದದ ಬಳಿಯೇ ಕೂತಿರುವಂತೆ ಚಿತ್ರಿಸಲಾಗಿರುತ್ತದೆ. ಲಕ್ಷ್ಮೀ ದೇವಿ ಯಾಕೆ ಸದಾ ವಿಷ್ಣುವಿನ ಪಾದದ ಬಳಿ ಇರುತ್ತಾಳೆ ಇಲ್ಲಿ ನೋಡಿ.

ಲಕ್ಚ್ಮೀ ದೇವಿ ತುಂಬಾ ಸ್ವಾಭಿಮಾನಿ ಎನ್ನಲಾಗುತ್ತದೆ. ಆಕೆಗೆ ಒಂಚೂರು ಅವಮಾನವಾದರೂ ಆ ಜಾಗದಲ್ಲಿ ಕ್ಷಣವೂ ಆಕೆ ನಿಲ್ಲುವುದಿಲ್ಲ. ಅಂತಹ ಲಕ್ಷ್ಮೀ ದೇವಿಯು ಸದಾ ವಿಷ್ಣುವಿನ ಪಾದದ ಬಳಿ ಅವನ ಕಾಲುಗಳನ್ನು ಒತ್ತುತ್ತಾ ಇರುವುದು ಯಾಕೆ ಎಂದು ನಿಮಗೆ ಅನಿಸಬಹುದು.

ಲಕ್ಷ್ಮೀ ದೇವಿಗೆ ಮಹಾವಿಷ್ಣುವಿನ ಮೇಲೆ ಅಪಾರ ಗೌರವ, ಪ್ರೀತಿ. ಗಂಡ-ಹೆಂಡತಿ ಹೇಗಿರಬೇಕು ಎಂದರೆ ಮಹಾವಿಷ್ಣು-ಲಕ್ಷ್ಮಿಯನ್ನು ಉದಾಹರಣೆಯಾಗಿ ತೋರಿಸುತ್ತಾರೆ. ಮಹಾವಿಷ್ಣು ಸರ್ವ ಲೋಕಗಳಿಗೆ ಅಧಿಪತಿ. ಬ್ರಹ್ಮಾಂಡವನ್ನೇ ರಕ್ಷಿಸುವ ಅವನ ಪಾದವನ್ನು ಲಕ್ಷ್ಮೀ ದೇವಿ ಗೌರವ ಭಾವದಿಂದ ಸೇವೆ ಮಾಡುತ್ತಾಳೆ.

ಅದೇ ರೀತಿ ಪಾದದ ಬಳಿಯಿದ್ದರೆ ಶೇಷಶಯನನಿಗೆ ಸದಾ ತನ್ನ ಮೇಲೆಯೇ ಗಮನವಿರುತ್ತದೆ ಎಂಬ ದೂರಾಲೋಚನೆಯೂ ಲಕ್ಷ್ಮೀ ದೇವಿಯದ್ದು. ಮಹಾವಿಷ್ಣುವಿನ ಪಾದ ಲಕ್ಷ್ಮೀ ದೇವಿಯ ನೆಲೆಯಿರುವ ಭಾಗವೂ ಹೌದು. ಹೀಗಾಗೀ ಶ್ರೇಷ್ಠ ಭಾಗದಲ್ಲೇ ಲಕ್ಷ್ಮೀ ದೇವಿ ಕುಳಿತು ಮಹಾವಿಷ್ಣುವಿನ ಪಾದ ಒತ್ತುತ್ತಾ ಸೇವೆ ಮಾಡುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?