Select Your Language

Notifications

webdunia
webdunia
webdunia
webdunia

ಭಯ ಮತ್ತು ಆತಂಕವಿದ್ದರೆ ಶಿವನ ಈ ಮಂತ್ರಗಳನ್ನು ಪಠಿಸಿ

Shiva

Krishnaveni K

ಬೆಂಗಳೂರು , ಮಂಗಳವಾರ, 3 ಸೆಪ್ಟಂಬರ್ 2024 (08:37 IST)
ಬೆಂಗಳೂರು: ಶಿವ ಎಂದರೆ ಭಯನಾಶಕ, ಅಭಯ ನೀಡುವವನು ಎಂದೇ ನಮಗೆ ನೆನಪಾಗುವುದು. ಹಾಗಿದ್ದರೆ ಭಯ ಮತ್ತು ಆತಂಕ ನಿವಾರಣೆಗೆ ಶಿವನ ಯಾವ ಸ್ತೋತ್ರ ಜಪಿಸಬೇಕು ಇಲ್ಲಿ ನೋಡಿ.

ಭಯ ಮತ್ತು ಆತಂಕ ಎನ್ನುವುದು ಬ್ರಹ್ಮಾಂಡದಲ್ಲಿರುವ ಎಲ್ಲಾ ಜೀವಿಗಳಿಗೂ ಇದ್ದೇ ಇರುತ್ತದೆ. ನಾವು ಮಾಡುವ ದೇವರ ಪ್ರಾರ್ಥನೆಯು ಮುಖ್ಯವಾಗಿ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡಬೇಕು. ಭಯ, ಆತಂಕ ದೂರವಾದರೆ ಜೀವನದಲ್ಲಿ ಯಶಸ್ಸು ಸಾಧ್ಯ.

ಮನುಷ್ಯನಿಗೆ ಮುಖ್ಯವಾಗಿ ಕಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ, ಆಯುಷ್ಯ ಭಯ. ಶಿವನು ನಮ್ಮ ಮನಸ್ಸಿನಲ್ಲಿರುವ ನಾನಾ ರೀತಿಯ ಭಯಗಳನ್ನು ಹೋಗಲಾಡಿಸುತ್ತಾನೆ. ಅದರಲ್ಲೂ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಶಿವನನ್ನು ಪೂಜೆ ಮಾಡುತ್ತೇವೆ. ಹೀಗಾಗಿ ಶಿವನ ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ಭಯ ನಾಶವಾಗುತ್ತದೆ. ಅದು ಹೀಗಿದೆ:

‘ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾರುಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಂಮೃತಾತ್’

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?