Publish Date: Thu, 29 Aug 2024 (08:37 IST)
Updated Date: Thu, 29 Aug 2024 (08:43 IST)
ಬೆಂಗಳೂರು: ಗುರುವಾರವನ್ನು ವಿಷ್ಣುದೇವನ ದಿನವೆಂದು ಪರಿಗಣಿಸಲಾಗುತ್ತದೆ. ಮಹಾವಿಷ್ಣು ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಜೊತೆಗೆ ಧೈರ್ಯವನ್ನೂ ನೀಡುತ್ತಾನೆ. ಭಯನಾಶವಾಗಿ ಧೈರ್ಯ ಮೂಡಲು ಮಹಾವಿಷ್ಣುವಿನ ಯಾವ ಮಂತ್ರ ಜಪಿಸಬೇಕು ನೋಡಿ.
ಮಹಾವಿಷ್ಣು ನಾಮ ಸ್ಮರಣೆ ನಮ್ಮ ಮನಸ್ಸಿನ ಭಯವನ್ನೂ ಹೋಗಲಾಡಿಸುತ್ತದೆ. ಮಹಾವಿಷ್ಣುವಿನ ಶಕ್ತಿಯೇ ಅಂತಹದ್ದು. ಜೀವನದಲ್ಲಿ ಸೋತ ಅನುಭವವಾದಾಗ, ಯಾವುದೋ ಅವ್ಯಕ್ತ ಭಯ ಕಾಡುತ್ತಿದ್ದರೆ ಮಹಾವಿಷ್ಣುವಿನನ್ನು ಕುರಿತು ಪ್ರಾರ್ಥನೆ ಮಾಡುವುದು ಉತ್ತಮ. ಅದಕ್ಕಾಗಿ ಈ ಮಂತ್ರವನ್ನುಹೇಳಬೇಕು.
ಓಂ ಶ್ರೀ ವಿಷ್ಣುವೇ ಚ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣುಃ ಪ್ರಚೋದಯಾತ್
ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ.
ಕೃಷ್ಣಾಯ ವಾಸುದೇವಾಯ ಹರೇ ಪರಮಾತ್ಮನೇ
ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ
ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ನಿಮ್ಮ ಮನೋಕ್ಲೇಶಗಳು ದೂರವಾಗಿ ಮನಸ್ಸಿಗೆ ಧೈರ್ಯ ಬರುವುದು. ಮತ್ತು ಜೀವನದ ಸಮಸ್ಯೆಗಳು ದೂರವಾಗಿ ಯಶಸ್ಸು ಕಾಣುತ್ತೀರಿ.