Select Your Language

Notifications

webdunia
webdunia
webdunia
webdunia

ಗುರುವಾರ ರಾಯರ ಆರಾಧನೆ ಮಾಡುವಾಗ ಈ ತಪ್ಪುಗಳು ಆಗದಿರುವಂತೆ ನೋಡಿಕೊಳ್ಳಿ

Raghavendra Swamy

Krishnaveni K

ಬೆಂಗಳೂರು , ಗುರುವಾರ, 22 ಆಗಸ್ಟ್ 2024 (08:41 IST)
ಬೆಂಗಳೂರು: ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆ ಆರಂಭವಾಗಿದೆ. ಕೆಲವರಿಗೆ ಮಂತ್ರಾಲಯಕ್ಕೆ ಹೋಗಲು ಅನುಕೂಲವಿರುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ರಾಯರ ಪೂಜೆ ಮಾಡಬಹುದು. ಆದರೆ ಮಾಡುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿ.

ಪೂಜಾ ವಿಧಿ ವಿಧಾನಗಳನ್ನು ಮಾಡುವಾಗ ಯಾವುದೇ ತಪ್ಪುಗಳಾಗಬಾರದು. ಗೊತ್ತಿದ್ದೂ ತಪ್ಪು ಮಾಡಿದರೆ ಅದರಿಂದ ಪೂಜೆಯ ಫಲ ಸಿಗದು. ಅರಿವಲ್ಲದೇ ಮಾಡುವ ತಪ್ಪುಗಳಿಗೆ ಕೊನೆಯಲ್ಲಿ ದೇವರ ಬಳಿ ಕ್ಷಮೆ ಯಾಚಿಸುತ್ತೇವೆ. ರಾಯರ ಪೂಜೆ ಮಾಡುವಾಗಲೂ ಹಾಗೇ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು.

ರಾಯರ ಪೂಜೆಯನ್ನು ಯಾವ ದಿನ ಬೇಕಾದರೂ ಮಾಡಬಹುದು. ಆದರೆ ಗುರುವಾರ ರಾಯರಿಗೆ ಅತ್ಯಂತ ವಿಶೇಷ ದಿನವಾಗಿದೆ. ಹೀಗಾಗಿ ಗುರುವಾರ ಬೆಳಿಗ್ಗೆಯೇ ಪೂಜೆ ಮಾಡಬೇಕು. ರಾಯರ ಪೂಜೆ ಮಾಡುವಾಗ ಅಶುದ್ಧ, ಅಸಂಪ್ರದಾಯಿಕ ಬಟ್ಟೆಗಳನ್ನು ಧರಿಸಬೇಡಿ. ಹಿಂದಿನ ದಿನವೇ ಶುದ್ಧೀಕರಿಸಿಟ್ಟ ಪಂಚೆ, ವಸ್ತ್ರ, ಸ್ತ್ರೀಯರಾದರೆ ಸೀರೆ ಉಟ್ಟು ಪೂಜೆ ಮಾಡಬೇಕು.

ಮನಸ್ಸು ಚಾಂಚಲ್ಯವಿರುವಾಗ, ಮಾಂಸಾಹಾರ ಸೇವಿಸಿಕೊಂಡು ಪೂಜೆ ಮಾಡಿ. ರಾಯರ ಪೂಜೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಮತ್ತು ಸಾತ್ವಿಕ ಆಹಾರ ಅಥವಾ ಉಪವಾಸ ವ್ರತವಿದ್ದು ಪೂಜೆ ಮಾಡಬೇಕು. ಅಪ್ಪಿತಪ್ಪಿಯೂ ಮದ್ಯ ಸೇವನೆ ಮಾಡಿ ಪೂಜೆ ಮಾಡಬಾರದು. ಭಕ್ತಿಯಿಂದ ಗುರುವಾರದಂದು ಪೂಜೆ ಮಾಡಿದರೆ ಆ ಮಹಾವಿಷ್ಣುವೇ ಸಂಪ್ರೀತನಾಗುತ್ತಾನೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?