Publish Date: Thu, 15 Aug 2024 (08:53 IST)
Updated Date: Thu, 15 Aug 2024 (08:56 IST)
ಬೆಂಗಳೂರು: ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದಾಗ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮತ್ತು ಶ್ರಾದ್ಧದ ಸಂದರ್ಭದಲ್ಲಿ ಗರುಡ ಪುರಾಣ ಓದುವುದು ಮತ್ತು ಕೇಳುವುದು ಅತ್ಯಂತ ಶ್ರೇಯಸ್ಕರವಾಗಿದೆ.
ಮೃತದೇಹದ ಅಂತ್ಯ ಸಂಸ್ಕಾರ ಮಾಡಿದ ಮೇಲೆಯೂ ಅದರ ಆತ್ಮಕ್ಕೆ ಮೋಕ್ಷ ಸಿಗುವಂತೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ. ಇದಕ್ಕಾಗಿ ಭಕ್ತಿಯಿಂದ ಶ್ರಾದ್ಧ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಸಾವಿನ ಮನೆಯಲ್ಲಿ ಗರುಡ ಪುರಾಣ ಓದುವುದು ಅತ್ಯಂತ ಮಹತ್ವದ್ದಾಗಿದೆ.
ಗರುಡ ಪುರಾಣವನ್ನು ಓದುವುದು ಅಥವಾ ಕೇಳುವುದರಿಂದ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಆತ್ಮವು ಮುಕ್ತಿಯ ಹಾದಿಯಲ್ಲಿ ಹೇಗೆ ನಡೆಯಬೇಕು ಎಂಬುದನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಆತ್ಮವು ಭ್ರಮೆಯಿಂದ ಮುಕ್ತವಾಗಿ ಭಗವಂತನೆಡೆಗೆ ಹೋಗುತ್ತದೆ.
ಈ ಸಂದರ್ಭದಲ್ಲಿ ಗರುಡ ಪುರಾಣವನ್ನು ಓದುವುದರಿಂದ ಆತ್ಮವು ಪ್ರೇತವಾಗಿ ಅಲೆದಾಡದೇ ಮುಕ್ತಿಯ ಕಡೆಗೆ ಚಲಿಸುತ್ತದೆ. ಗರುಡ ಪುರಾಣದಲ್ಲಿ ಸಾವಿನ ನಂತರ ಮನುಷ್ಯ ದೇಹ ಏನಾಗುತ್ತದೆ, ಮೋಕ್ಷದ ದಾರಿ ಯಾವುದು ಎಂಬುದನ್ನು ವಿವರವಾಗಿ ಹೇಳಲಾಗಿದೆ. ಈ ಕಾರಣಕ್ಕೆ ಗರುಡ ಪುರಾಣ ಓದಬೇಕು.