Select Your Language

Notifications

webdunia
webdunia
webdunia
webdunia

ಸಾವಿನ ಮನೆಯಲ್ಲಿ ಈ ಕೆಲಸಗಳನ್ನು ಮಾಡಬಾರದು

Murder

Krishnaveni K

ಬೆಂಗಳೂರು , ಬುಧವಾರ, 14 ಆಗಸ್ಟ್ 2024 (08:17 IST)
ಬೆಂಗಳೂರು: ಎಷ್ಟೇ ಹತ್ತಿರದವರಾದರೂ, ದೂರದವರಾದರೂ ಒಂದು ಸಾವಾಗಿರುವ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಹಿಂದೂ ಧರ್ಮದ ಶಾಸ್ತ್ರದ ಪ್ರಕಾರ ನಿಷಿದ್ಧವಾಗಿದೆ. ಅವು ಯಾವುವು ನೋಡೋಣ.

ಸಾವು ಎನ್ನುವುದು ಒಂದು ರೀತಿಯ ಶೂನ್ಯತೆಯ ಭಾವವಾಗಿದೆ. ಯಾರೋ ಒಬ್ಬರನ್ನು ದೈಹಿಕವಾಗಿ ಕಳೆದುಕೊಳ್ಳುವುದು ಅವರನ್ನು ಅವಲಂಬಿಸಿದವರಿಗೆ ಮಾನಸಿಕವಾಗಿ ಅತೀವ ದುಃಖ ನೀಡುವ ವಿಚಾರವಾಗಿದೆ. ಇಂತಹ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿದೆ.

ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಹಚ್ಚಬಾರದು. ಗರುಡ ಪುರಾಣದ ಪ್ರಕಾರ ಸಾವಿನ ಮನೆಯಲ್ಲಿ ಒಲೆ ಉರಿಸಿದರೆ ಆ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ. ಅಂತ್ಯ ಸಂಸ್ಕಾರ ನಡೆಯುವ ಮೊದಲೇ ಒಲೆ ಉರಿಸಿದರೆ ಆ ಆತ್ಮವು ಲೌಕಿಕ ಮೋಹದಿಂದ ಮುಕ್ತವಾಗಿ ಪರಲೋಕ ಸೇರುವುದಿಲ್ಲ.

ಅದೇ ರೀತಿ ಸಾವಿನ ಮನೆಯಲ್ಲಿ ಜೋರಾಗಿ ನಗುವುದು, ತಮಾಷೆಯ ಮಾತನಾಡುವುದು, ಜೋರಾಗಿ ಸಂಗೀತ ಅಥವಾ ಹಾಡು, ಅಬ್ಬರದ ಮ್ಯೂಸಿಕ್ ಹಾಕುವುದು ನಿಷಿದ್ಧವಾಗಿದೆ. ಆತ್ಮವನ್ನು ಮೌನವಾಗಿ, ಶಾಂತಿಯುತವಾಗಿ ಕಳುಹಿಸಿಕೊಡಬೇಕಾಗಿರುವುದು ನಮ್ಮೆಲ್ಲಾ ಕರ್ತವ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?