Select Your Language

Notifications

webdunia
webdunia
webdunia
webdunia

ಮಹಾವಿಷ್ಣು ಮತ್ತು ಲಕ್ಷ್ಮಿಯ ಪೂಜೆಗೆ ಈ ಹೂವುಗಳನ್ನು ಬಳಸಬಾರದು

Astrology

Krishnaveni K

ಬೆಂಗಳೂರು , ಬುಧವಾರ, 7 ಆಗಸ್ಟ್ 2024 (08:44 IST)
ಬೆಂಗಳೂರು: ದೇವರ ಪೂಜೆಗೆ ನಾವು ಯಾವ ಹೂವು ಬಳಸಬಾರದು, ಯಾವುದನ್ನು ಬಳಸಬೇಕು ಎಂಬ ಅರಿವು ನಮಗಿರಬೇಕು. ಅದರಲ್ಲೂ ವಿಶೇಷವಾಗಿ ಮಹಾವಿಷ್ಣು ಮತ್ತು ವಿಷ್ಣುವಿನ ಪೂಜೆಗೆ ಯಾವ ಹೂವು ಬಳಸಬಾರದು ಎಂಬ ಮಾಹಿತಿ ಇಲ್ಲಿದೆ.

ಮಹಾವಿಷ್ಣುವಿಗೆ ತುಳಸಿ, ಕಿಸ್ಕಾರ ಹೂವುಗಳ ಮಾಲೆಯೆಂದರೆ ಅತ್ಯಂತ ಪ್ರಿಯವಾಗಿರುತ್ತದೆ. ಸಾಮಾನ್ಯವಾಗಿ ಯಾವುದೇ ದೇವರಿಗೆ ಅರ್ಪಿಸುವ ಹೂವು ನೆಲಕ್ಕೆ ಬೀಳಬಾರದು ಎನ್ನಲಾಗುತ್ತದೆ. ಒಂದು ವೇಳೆ ನೆಲಕ್ಕೆ ಬಿದ್ದ ಹೂವನ್ನು ಬಳಸುವುದಿದ್ದರೆ ಅದನ್ನು ನೀರಿನಿಂದ ತೊಳೆದು ಶುದ್ಧಗೊಳಿಸಬೇಕು.

ಬಾಡಿದ ಹೂವು ಅಥವಾ ಮೊಗ್ಗುಗಳನ್ನೂ ದೇವರಿಗೆ ಅರ್ಪಿಸಬಾರದು. ಅದೇ ರೀತಿ ಅಶುದ್ಧವಾದ ಜಾಗದಲ್ಲಿ ಬೆಳೆದ ಹೂವು, ಕುಸುಮವಿಲ್ಲದ ಹೂವುಗಳನ್ನು ದೇವರಿಗೆ ಅರ್ಪಿಸುವುದು ಶುಭವಲ್ಲ. ಮುಖ್ಯವಾಗಿ ಮಹಾವಿಷ್ಣುವಿಗೆ ಕೇದಗೆ, ದತುರಾ, ಅರ್ಕದ ಹೂವುಗಳನ್ನು ಬಳಸಬಾರದು.

ಅದೇ ರೀತಿ ಲಕ್ಷ್ಮೀ ಪೂಜೆಯಲ್ಲೂ ಯಾವ ಹೂವು ಬಳಸಬೇಕು ಎನ್ನುವುದಕ್ಕೆ ಕೆಲವೊಂದು ನಿಯಮಗಳಿವೆ. ಲಕ್ಷ್ಮೀ ಪೂಜೆಯಲ್ಲಿ ಕಮಲವಿದ್ದರೆ ವಿಶೇಷವಾಗಿರುತ್ತದೆ. ಆದರೆ ಲಕ್ಷ್ಮೀಗೆ ಪಾರಿಜಾತ, ಬೇಲ, ಅರ್ಕ, ಸುಗಂಧಬಾಲ ಹೂವುಗಳನ್ನು ಬಳಸಬಾರದು. ಅದೇ ರೀತಿ ಹೂವುಗಳ ಮೊಗ್ಗುಗಳನ್ನೂ ಲಕ್ಷ್ಮೀ ದೇವಿ ಪೂಜೆಗೆ ಬಳಸಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?