Select Your Language

Notifications

webdunia
webdunia
webdunia
webdunia

ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು

Onam Lunch

Krishnaveni K

ಬೆಂಗಳೂರು , ಶನಿವಾರ, 3 ಆಗಸ್ಟ್ 2024 (08:45 IST)
Photo Credit: Facebook
ಬೆಂಗಳೂರು: ನಮ್ಮ ಕೆಲವೊಂದು ಶಾಸ್ತ್ರಗಳನ್ನು ಹಿರಿಯರು ಸುಮ್ಮನೇ ಮಾಡಿಲ್ಲ. ಅದಕ್ಕೆ ವೈಜ್ಞಾನಿಕ ಅಥವಾ ತಾರ್ಕಿಕ ಅರ್ಥ ಇದ್ದೇ ಇರುತ್ತದೆ. ಕೆಲವೊಂದು ಮನೆಗಳಲ್ಲಿ ಅಥವಾ ಸ್ಥಳದಲ್ಲಿ ನಾವು ಊಟ ಮಾಡಬಾರದು ಎಂಬ ನಿಯಮವಿದೆ. ಎಲ್ಲೆಲ್ಲಾ ಎಂದು ಇಲ್ಲಿ ನೋಡಿ.

ಅನ್ನ ಎಂದರೆ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ದೇವರ ಸಮಾನ. ಅದಕ್ಕೆ ಅಪಮಾನ ಮಾಡುವುದು ಅಷ್ಟೇ ಪಾಪದ ಕೃತ್ಯವಾಗಿದೆ. ಅನ್ನದಲ್ಲಿ ನಾವು ಅನ್ನಪೂರ್ಣೆ ದೇವಿಯನ್ನು ಕಾಣುತ್ತೇವೆ. ಹೀಗಿರುವಾಗ ನಾವು ಉಚಿತವಲ್ಲದ ಸ್ಥಳಗಳಲ್ಲಿ ಊಟ ಮಾಡುವುದೂ ಅನ್ನಕ್ಕೆ ಮಾಡಿದ ಅವಮಾನದಂತೆ.

ಶಾಸ್ತ್ರದ ಪ್ರಕಾರ ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹದವರ ಮನೆಯಲ್ಲಿ ಊಟ ಮಾಡಬಾರದು.ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತೆ.

ಹಾಗಗಿದ್ದರೆ ಎಂತಹವರ ಮನೆಯಲ್ಲಿ ಊಟ ಮಾಡಬೇಕು? ಧರ್ಮಶಾಸ್ತ್ರಗಳು ಹೇಳುವ ಪ್ರಕಾರ ಯಾರು ಮನಸ್ಸಿನಿಂದ ಶುದ್ಧರೋ, ಯಾರ ಮನೆಯಲ್ಲಿ ಸ್ವಭಾವತಃ ಸಾಧುಗಳಿದ್ದಾರೋ, ಯಾರು ಶರೀರ ಶುದ್ಧಿ ಹೊಂದಿರುತ್ತಾರೋ ಅಂತಹವರ ಮನೆಯಲ್ಲಿ ಊಟ ಮಾಡಬೇಕು. ಇಂತಹವರ ಮನೆಯಲ್ಲಿ ಊಟ ಮಾಡಿದರೆ ನಮಗೂ ಯಾವುದೇ ದೋಷ ತಟ್ಟುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?