ಕೇರಳ: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆಯಾಗಿದ್ದು, ಇನ್ನೂ ಬಗೆದಷ್ಟೂ ಮೃತದೇಹಗಳು ಸಿಗುತ್ತಿದ್ದು, ಸದ್ಯಕ್ಕೆ ರಕ್ಷಣಾ ಕಾರ್ಯ ಮುಗಿಯುವಂತದಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಎನ್‌ಡಿಆರ್‌ಎಫ್ ಡಿಐಜಿ ಮೊಹ್ಸೆನ್ ಶಾಹಿದಿ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಪೀಡಿತ ಸ್ಥಳದಲ್ಲಿ ಕೇಂದ್ರೀಯ ಪಡೆಗಳ ಸಾಕಷ್ಟು ತಂಡಗಳಿವೆ. ಜುಲೈ 30 ರ ಮುಂಜಾನೆ ವಯನಾಡಿನ ಮುಂಡಕ್ಕೈ ಮತ್ತು ಚುರಲ್ಮಲಾದಲ್ಲಿ ಎರಡು ಭಾರಿ ಭೂಕುಸಿತಗಳು ಸಂಭವಿಸಿದವು, ವ್ಯಾಪಕ ನಾಶ, ಜೀವಹಾನಿ ಮತ್ತು ನೂರಾರು ಜನರಿಗೆ ಗಾಯಗಳಾಗಿವೆ.
"ಅನೇಕ ಮಂದಿ ನಾಪತ್ತೆಯಾಗಿದ್ದು, ಈಗಾಗಲೇ ಹಲವು ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಪಡೆ ಚಾಲಿಯಾರ್ ನದಿಯಿಂದ ಹಲವು ದೇಹಗಳನ್ನು ಹೊರತೆಗೆದಿದ್ದಾರೆ. ದೇಹದ ಹಲವು ಭಾಗಗಳನ್ನು ಸಹ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯ ಕೆಲವು ದಿನಗಳಲ್ಲಿ ಮುಗಿಯುವಂತದಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸದ್ಯಕ್ಕೆ 12 ಸಚಿವರು ವಯನಾಡಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ನಾಲ್ವರು ಸಚಿವರು ಇಲ್ಲಿಯೇ ಮೊಕ್ಕಾಂ ಹೂಡಲು ಸರ್ವಪಕ್ಷ ಸಭೆ ನಿರ್ಧರಿಸಿದೆ ಎಂದು ಹೇಳಿದರು.