Select Your Language

Notifications

webdunia
webdunia
webdunia
webdunia

ಕೇರಳದ ವಿವಿಗಳಲ್ಲಿ 4 ವರ್ಷದ ಪದವಿ ಕೋರ್ಸ್‌ಗಳಿಗೆ ಸಿಎಂ ಪಿಣರಾಯಿ ಚಾಲನೆ

ಕೇರಳದ ವಿವಿಗಳಲ್ಲಿ 4 ವರ್ಷದ ಪದವಿ ಕೋರ್ಸ್‌ಗಳಿಗೆ ಸಿಎಂ ಪಿಣರಾಯಿ ಚಾಲನೆ

Sampriya

ತಿರುವನಂತಪುರ , ಸೋಮವಾರ, 1 ಜುಲೈ 2024 (16:52 IST)
Photo Courtesy X
ತಿರುವನಂತಪುರ: ಕೇರಳದಲ್ಲಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗುತ್ತಿರುವ ನಾಲ್ಕು ವರ್ಷದ ಪದವಿ ಕೋರ್ಸ್‌ಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಾಲನೆ ನೀಡಿ ಮಾತನಾಡಿದರು.

ತಿರುವನಂತಪುರದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳಿಗೆ ಮುಖ್ಯಮಂತ್ರಿ ವಿಜಯನ್‌ ಚಾಲನೆ ನೀಡಿದರು.

ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗುತ್ತಿರುವ ನಾಲ್ಕು ವರ್ಷದ ಪದವಿ ಕೇರಳದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ತರಲಿದೆ. ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಶಿಕ್ಷಣವನ್ನು ಪಡೆಯಲಿದ್ದಾರೆ. ಇದರಲ್ಲಿ ಆನ್‌ಲೈನ್‌ ವೇದಿಕೆಯಲ್ಲಿ ಕಲಿಕೆ, ಪ್ರಾಯೋಗಿಕ ಕಲಿಕೆ ಮತ್ತು ಸ್ಥಳಗಳ ಭೇಟಿಗೆ ಸಮನಾದ ಪ್ರಾಮುಖ್ಯತೆ ನೀಡಲಾಗುವುದು ಎಂದು ವಿವರಣೆ ನೀಡಿದರು.

ಇದೇ ವೇಳೆ, ಪಠ್ಯಕ್ರಮ ಪರಿಷ್ಕರಣೆ ಮತ್ತು ಕೋರ್ಸ್‌ಗಳಲ್ಲಿ ತಂದ ಸುಧಾರಣೆಗಳ ಜತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಇದೇ ಸಮನಾದ ಮಹತ್ವವನ್ನು ನಮ್ಮ ಸರ್ಕಾರ ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಗರೇಟ್ ಬಿಟ್ಟ ಸಿಕ್ರೇಟ್ ಹೇಳಿದ ಸಿಎಂ ಸಿದ್ದರಾಮಯ್ಯ