Select Your Language

Notifications

webdunia
webdunia
webdunia
webdunia

ಮಕ್ಕಳು ನಿಶ್ಯಕ್ತರಾಗಿದ್ದರೆ ಮಂಗಳವಾರ ಆಂಜನೇಯಸ್ವಾಮಿಗೆ ಈ ಸೇವೆ ಮಾಡಿ

Anjaneyaswamy

Krishnaveni K

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (08:29 IST)
ಬೆಂಗಳೂರು: ಕೆಲವೊಮ್ಮೆ ಮಕ್ಕಳು ಎಷ್ಟೇ ಆಹಾರ ತಿಂದರೂ ನಿಶ್ಯಕ್ತರಾಗಿರುವಂತೆ ತೋರುತ್ತದೆ. ಇಂತಹ ಮಕ್ಕಳಿಗಾಗಿ ಮಂಗಳವಾರವಾದ ಇಂದು ಆಂಜನೇಯಸ್ವಾಮಿಗೆ ಈ ಒಂದು ಸೇವೆ ಮಾಡಿದರೆ ಪರಿಹಾರ ಸಿಗುತ್ತದೆ. ಅದರ ಬಗ್ಗೆ ಇಲ್ಲಿ ನೋಡೋಣ.

ಮಂಗಳವಾರ ಆಂಜನೇಯಸ್ವಾಮಿಗೆ ವಿಶೇಷ ದಿನವಾಗಿರುತ್ತದೆ. ಈ ದಿನ ಆಂಜನೇಯನನ್ನು ಪೂಜೆ ಮಾಡುವುದರಿಂದ ಶನಿಯ ಕಾಟದಿಂದಲೂ ಮುಕ್ತಿ ಸಿಗುತ್ತದೆ. ಅಲ್ಲದೆ, ವಿದ್ಯೆ, ಬುದ್ಧಿ, ಆರೋಗ್ಯ ಸೇರಿದಂತೆ ಜೀವನದ ಹಲವು ಸಮಸ್ಯೆಗಳಿಗೆ ಇಂದು ಆಂಜನೇಯ ಸ್ವಾಮಿಯನ್ನು ಪೂಜೆ ಮಾಡುವುದರಿಂದ ಪರಿಹಾರ ಸಿಗುತ್ತದೆ.

ಮಂಗಳವಾರದಂದು ಆಂಜನೇಯ ಸ್ವಾಮಿಗೆ ವೀಳ್ಯದ ಎಲೆಯ ಹಾರ ಮಾಡಿ ಅರ್ಪಿಸುವುದರಿಂದ ಮಕ್ಕಳು ನಿಶ್ಯಕ್ತರೆನಿಸಿದ್ದರೆ ಅವರ ಆರೋಗ್ಯ ಸುಧಾರಿಸಿ ಚುರುಕಾಗುತ್ತಾರೆ. ಮಕ್ಕಳು ಮೈ-ಕೈ ತುಂಬಿಕೊಂಡು ದೈಹಿಕವಾಗಿ ಸದೃಢರಾಗಲು ಇಂದು ವೀಳ್ಯದೆಲೆಯ ಹಾರ ಅರ್ಪಿಸಿ.

ಇದಲ್ಲದೆ ಮನೆಯಲ್ಲಿ ನೆಮ್ಮದಿ ಇಲ್ಲದೇ ಇದ್ದರೆ, ಶತ್ರು ಕಾಟವಿದ್ದರೆ, ಯಾರೋ ಮಂತ್ರ-ಮಾಟ ಮಾಡಿಸಿದ್ದರೆ, ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗಿದ್ದರೆ, ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರೆ ಇಂದು ಆಂಜನೇಯ ಸ್ವಾಮಿಗೆ ಸುಂದರ ಕಾಂಡ ಪಾರಾಯಣ ಮಾಡಿ ವೀಳ್ಯದೆಲೆಯ ಹಾರ ಅರ್ಪಿಸುವುದು ಶ್ರೇಷ್ಠವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?