Select Your Language

Notifications

webdunia
webdunia
webdunia
webdunia

ಮಹಾವಿಷ್ಣುವಿನ ಪಾದವಿರುವ ಈ ದೇವಾಲಯಕ್ಕೆ ದುಃಖ ನಾಶವಾಗುತ್ತದೆ

Lord Vishnu

Krishnaveni K

ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2024 (08:39 IST)
ಬೆಂಗಳೂರು: ನಮ್ಮ ಭಾರತ ದೇಶದಲ್ಲಿ ಎಷ್ಟೋ ದೇವಾಲಯಗಳು ಅನೇಕ ವಿಶೇಷತೆಗಳನ್ನು ಹೊಂದಿವೆ. ಮಹಾವಿಷ್ಣುವಿನ ಈ ದೇವಾಲಯದ ವಿಶೇಷತೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.

ಬಿಹಾರದ ಗಯಾದಲ್ಲಿ ಫಾಲ್ಗು ನದಿ ಬಳಿ ಒಂದು ಮಹಾವಿಷ್ಣುವಿನ ದೇವಾಲಯವಿದೆ. ಇಲ್ಲಿನ ವಿಶೇಷವೆಂದರೆ ಈ ದೇವಾಲಯದಲ್ಲಿ ವಿಷ್ಣು ಪಾದವನ್ನು ಪೂಜಿಸಲಾಗುತ್ತದೆ. ಮಹಾವಿಷ್ಣುವಿನ ಪಾದವನ್ನು ಪೂಜಿಸುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿಗೆ ಭೇಟಿ ನೀಡುವುದರಿಂದ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗುವುದಲ್ಲದೆ, ಜೀವನದ ದುಃಖಗಳೆಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಗಯಾಸುರ ಎಂಬ ರಾಕ್ಷಸನನ್ನು ಮಹಾವಿಷ್ಣುವು ಇಲ್ಲಿಯೇ ಬಂಡೆಯ ಮೇಲೆ ತುಳಿದು ಸಂಹಾರ ಮಾಡಿದ ಎಂಬ ಪೌರಾಣಿಕ ಹಿನ್ನಲೆ ಈ ಕ್ಷೇತ್ರಕ್ಕಿದೆ. ಹೀಗಾಗಿಯೇ ಅಂದು ಮಹಾವಿಷ್ಣು ಕಾಲಿನಿಂದ ರಾಕ್ಷಸನನ್ನು ತುಳಿದ ಸ್ಥಳವನ್ನೇ ಇಂದು ಮಹಾವಿಷ್ಣುವಿನ ಹೆಜ್ಜೆಗುರುತಾಗಿ ಪೂಜೆ ಮಾಡಲಾಗುತ್ತದೆ.

ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಇಲ್ಲಿನ ಶಿಲೆಯ ಮೇಲಿರುವ ವಿಷ್ಣುವಿನ ಪಾದವನ್ನು ಸ್ಪರ್ಶಿಸುವುದರಿಂದ ನಿಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತದೆ. ಈ ದೇವಾಲಯಕ್ಕೆ ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮ ಸೀತಾದೇವಿ ಸಹಿತ ಭೇಟಿ ಮಾಡಿದ್ದನಂತೆ. ಹೀಗಾಗಿ ಈ ಪುಣ್ಯ ಸ್ಥಳ ವಿಶೇಷವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?