Select Your Language

Notifications

webdunia
webdunia
webdunia
webdunia

ಕಾಲಭೈರವ ಸ್ತೋತ್ರ ಓದುವುದರ ಮೂರು ಮುಖ್ಯ ಉಪಯೋಗಗಳು

Astrology

Krishnaveni K

ಬೆಂಗಳೂರು , ಸೋಮವಾರ, 2 ಡಿಸೆಂಬರ್ 2024 (08:39 IST)
ಬೆಂಗಳೂರು: ಇಂದು ಸೋಮವಾರವಾಗಿದ್ದು ಶಿವನನ್ನು ಆರಾಧಿಸುವ ದಿನವಾಗಿದೆ. ಕಾಲಭೈರವ ಎನ್ನುವುದು ಶಿವನ ಇನ್ನೊಂದು ಭೀಭತ್ಸ ರೂಪವಾಗಿದೆ. ಕಾಲಭೈರವನನ್ನು ಆದಿ ಶಂಕರಾಚಾರ್ಯರು ತಮ್ಮ ಸ್ತೋತ್ರದ ಮೂಲಕ ವರ್ಣಿಸಿದ್ದಾರೆ.

ಕಾಲಭೈರವರ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದು ನಮಗೆ ಶ್ರೇಯಸ್ಕರವಾಗಿದೆ. ಕಾಲಭೈರವ ಸ್ತೋತ್ರ ಶಿವನ ಶಕ್ತಿಶಾಲೀ ಮಂತ್ರಗಳಲ್ಲಿ ಒಂದಾಗಿದೆ. ಇದನ್ನು ಪಠಿಸುವಾಗ ತಪ್ಪಿಲ್ಲದೇ ಪಠಿಸುವುದು ಮುಖ್ಯವಾಗಿದೆ. ಕಾಲಭೈರವನ ಸ್ತೋತ್ರ ಓದುವುದರಿಂದ ನಮಗೆ ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಅದೇನೆಂದು ನೋಡೋಣ.

ಸವಾಲುಗಳನ್ನು ಎದುರಿಸುತ್ತೀರಿ: ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಉದ್ಯೋಗ ಇರಲಿ, ಕೌಟುಂಬಿಕವಾಗಿ ಇರಲಿ ಯಾವುದೇ ಸವಾಲುಗಳನ್ನು ಎದುರಿಸಲು ಧೈರ್ಯ ಬರಬೇಕೆಂದರೆ ಕಾಲಭೈರವ ಸ್ತೋತ್ರ ಓದುವುದು ಉತ್ತಮ

ಮಾನಸಿಕ ಗೊಂದಲಗಳು ನಿವಾರಣೆಯಾಗುತ್ತವೆ: ಮಾನಸಿಕವಾಗಿ ಹಲವು ಚಿಂತೆಗಳು ಕಾಡುತ್ತಿದ್ದರೆ ಕಾಲಭೈರವನ ಸ್ತೋತ್ರ ಓದುವುದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಗೊಂದಲಗಳು ನಿವಾರಣೆಯಾಗುತ್ತವೆ.

ಧೈರ್ಯ ವೃದ್ಧಿ: ಮಾನಸಿಕವಾಗಿ ಅಧೈರ್ಯ ಕಾಡುತ್ತಿದ್ದರೆ, ಯಾವುದೇ ಕೆಲಸ ಮಾಡಲು ಹಿಂಜರಿಕೆಯಿದ್ದರೆ ಕಾಲಭೈರವನ ಸ್ತೋತ್ರ ಪಠಿಸಿ. ಇದರಿಂದ ನಮ್ಮ ಆಂತರಿಕ ಶಕ್ತಿ ಉದ್ದೀಪನೆಯಾಗಿ ನಾವು ಧೈರ್ಯವಾಗಿ ನಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?