Select Your Language

Notifications

webdunia
webdunia
webdunia
webdunia

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

Lord Visnu

Krishnaveni K

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (08:45 IST)
ಬೆಂಗಳೂರು: ಹಿಂದೂ ಪುರಾಣದ ಪ್ರಕಾರ ಕಾರ್ತಿಕ ಮಾಸ ಎಂದರೆ ಅತ್ಯಂತ ಶ್ರೇಷ್ಠ ಮಾಸವಾಗಿದೆ. ಈ ಮಾಸದಲ್ಲಿ ಕೆಲವೊಂದು ಕೆಲಸ ಮಾಡುವುದರಿಂದ ನಮಗೆ ಮೋಕ್ಷ ಸಿಗುವುದು ಎಂಬ ನಂಬಿಕೆಯಿದೆ.

ಕಾರ್ತಿಕ ಮಾಸ ಎಂಬುದು ಮಹಾವಿಷ್ಣುವಿಗೆ ಸಮರ್ಪಿತವಾದ ಮಾಸವಾಗಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಜೊತೆಗೆ ಶಿವ, ತುಳಸಿಯನ್ನು ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಕಾರ್ತಿಕ ಮಾಸದ್ಲಿ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ ಕೆಲಸವಾಗಿದೆ.

ಕಾರ್ತಿಕ ಮಾಸದಲ್ಲಿ ಅಗತ್ಯವಿರುವವರಿಗೆ ಬಟ್ಟೆ ದಾನ ಮಾಡುವುದು, ಬಡವರಿಗೆ ಹಣ್ಣು, ಹಂಪಲುಗಳನ್ನು ನೀಡುವುದು, ಗೋ ಶಾಲೆಗಳಲ್ಲಿ ಹಸುವಿನ ಸೇವೆ ಮಾಡುವುದು ಅಥವಾ ಗೋ ಗ್ರಾಸ ನೀಡುವುದು, ತುಳಸಿ, ನೆಲ್ಲಿಕಾಯಿ, ಧಾನ್ಯಗಳನ್ನು ದಾನ ಮಾಡುವುದು, ದೇವಾಲಯದಲ್ಲಿ ದೀಪ ಹಚ್ಚುವುದು, ಮಹಾವಿಷ್ಣುವನ್ನು ಮುಂಜಾನೆ ಮತ್ತು ಸಂಜೆ ಪೂಜೆ ಮಾಡುವುದರಿಂದ ಮೋಕ್ಷ ಪಡೆದುಕೊಳ್ಳಬಹುದು ಎಂಬ ನಂಬಿಕೆಯಿದೆ.

ಕಾರ್ತಿಕ ಮಾಸವನ್ನು ದೇವರ ಮಾಸ ಎಂದೇ ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಬಡವ-ಬಲ್ಲಿದರ ಸೇವೆ ಮಾಡುವುದರಿಂದ ದೇವರಿಗೆ ಅತ್ಯಂತ ಪ್ರಿಯರಾಗುತ್ತೀರಿ. ಸೂರ್ಯೋದಯಕ್ಕೆ ಮುನ್ನ ನದಿ ಸ್ನಾನ ಮಾಡಿ ದೇವರ ಪ್ರಾರ್ಥನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?