Select Your Language

Notifications

webdunia
webdunia
webdunia
webdunia

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Astrology

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (09:09 IST)
ಬೆಂಗಳೂರು: ಮಕರ ರಾಶಿಯವರಿಗೆ 2025 ಶುಭದಾಯಕವಾಗಿದ್ದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. 2025 ರ ಆರೋಗ್ಯ ಫಲ ಇಲ್ಲಿದೆ ನೋಡಿ.

ಮಕರ ರಾಶಿಯವರು ಸಾಮಾನ್ಯವಾಗಿ ಸಂಧು ವಾತ, ಕೈ ಕಾಲುಗಳಲ್ಲಿ ನೋವು, ಉಸಿರಾಟದ ಸಮಸ್ಯೆ, ಹೃದಯ ಸಂಬಂಧೀ ಆರೋಗ್ಯ ಸಮಸ್ಯೆಗೊಳಗಾಗುತ್ತಾರೆ. ಆದರೆ ಈ ವರ್ಷದ ಆರಂಭದಲ್ಲೇ ಮಕರ ರಾಶಿಯವರಿಗೆ ಆರೋಗ್ಯದ ವಿಚಾರದಲ್ಲಿ ಶುಭದಾಯಕವಾಗಿರುತ್ತದೆ.

ಗುರು ಮತ್ತು ಶನಿಯ ಅನುಗ್ರಹದಿಂದ ಏಪ್ರಿಲ್ 2025 ರವರೆಗೆ ಆರೋಗ್ಯದಲ್ಲಿ ಸುಧಾರಣೆಯಿರಲಿದೆ. ಆದರೆ ಬಳಿಕ ಕೊಂಚ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಹಾಗಿದ್ದರೂ ಗಂಭೀರ ಅಪಾಯಗಳೇನೂ ಇರುವುದಿಲ್ಲ. ಉತ್ತಮ ಜೀವನ ಶೈಲಿ ಅಳವಡಿಸುವುದು ಮುಖ್ಯ.

ಧೂಮಪಾನ, ಮದ್ಯಪಾನ ಮಾಡುತ್ತಿದ್ದರೆ ಆದಷ್ಟು ದೂರವಿರುವುದನ್ನು ಅಭ್ಯಾಸ ಮಾಡಿ. ವರ್ಷದ ಮಧ್ಯಾವಧಿಯಲ್ಲಿ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬಂದೀತು. ಆದರೆ ಗಾಬರಿಪಡಬೇಕಾಗಿರುವುದು ಏನೂ ಇರುವುದಿಲ್ಲ. ಮಹಿಳೆಯರಿಗೆ ಸಂಧು ವಾತದಂತಹ ಸಮಸ್ಯೆಗಳು ಕಂಡುಬಂದೀತು. ಇದರಿಂದ ದೈನಂದಿನ ಕೆಲಸಗಳಿಗೆ ಕೊಂಚ ತೊಂದರೆಗಳು ಬಂದೀತು. ಆದರೂ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದು. ಉತ್ತಮ ಆರೋಗ್ಯಕ್ಕಾಗಿ ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ