Select Your Language

Notifications

webdunia
webdunia
webdunia
webdunia

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಪದೇ ಪದೇ ಕೈ ಕೊಡುತ್ತದೆ

Astrology

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (08:55 IST)
ಬೆಂಗಳೂರು: ತುಲಾ ರಾಶಿಯವರಿಗೆ 2025 ನೇ ವರ್ಷ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಉತ್ತಮವಲ್ಲ. ಪದೇ ಪದೇ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಲೇ ಇರುತ್ತವೆ.

ತುಲಾ ರಾಶಿಯವರು ಸಾಮಾನ್ಯವಾಗಿ ಮಲಬದ್ಧತೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ವರ್ಷವಿಡೀ ನಿಮಗೆ ಆರೋಗ್ಯದ ವಿಚಾರದಲ್ಲಿ ಪದೇ ಪದೇ ಕಿರಿ ಕಿರಿ ಉಂಟಾಗಲಿದ್ದು ವೈದ್ಯಕೀಯ ಖರ್ಚು ವೆಚ್ಚಗಳು ಹೆಚ್ಚಾದೀತು.

2025 ನೇ ವರ್ಷ ತುಲಾ ರಾಶಿಯವರು ಆರೋಗ್ಯವನ್ನು ಕಾಪಾಡಿಕೊಳ್ಳುವುದರತ್ತ ಗಮನ ಹರಿಸಬೇಕು. ಸಮಾಧಾನಕರ ಅಂಶವೆಂದರೆ ಯಾವುದೂ ಜೀವಾಪಾಯ ತರುವಂತಹ ಗಂಭೀರ ಖಾಯಿಲೆಗಳಾಗಿರುವುದಿಲ್ಲ. ಆದರೆ ಮಲಬದ್ಧತೆ, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಲೇ ಇರುತ್ತದೆ.

ವರ್ಷಾರಂಭದಲ್ಲಿ ಆರೋಗ್ಯ ಉತ್ತಮವಾಗಿದೆ ಎಂದೆನಿಸಬಹುದು. ಆದರೆ ದ್ವಿತೀಯಾರ್ಧದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ಮಧುಮೇಹ, ಮೂತ್ರದ ಸೋಂಕು, ಸೈನಸ್, ಬೆನ್ನುನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಉತ್ತಮ ಆಹಾರ, ಜೀವನ ಕ್ರಮ ಮತ್ತು ದೇವತಾ ಪ್ರಾರ್ಥನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಲು ಪ್ರಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ಕನ್ಯಾ ರಾಶಿಯವರಿಗೆ ವರ್ಷಾರಂಭದಲ್ಲಿ ಆರೋಗ್ಯದಲ್ಲಿ ಉತ್ತಮ ಫಲ