Select Your Language

Notifications

webdunia
webdunia
webdunia
webdunia

Horoscope 2025: ಕನ್ಯಾ ರಾಶಿಯವರಿಗೆ ವರ್ಷಾರಂಭದಲ್ಲಿ ಆರೋಗ್ಯದಲ್ಲಿ ಉತ್ತಮ ಫಲ

Astrology

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (08:42 IST)
ಬೆಂಗಳೂರು: ಕನ್ಯಾ ರಾಶಿಯವರಿಗೆ ವರ್ಷಾರಂಭದಲ್ಲಿ ಆರೋಗ್ಯ ಉತ್ತಮವಾಗಿರಲಿದ್ದು, 2025 ರ ವರ್ಷವಿಡೀ ಆರೋಗ್ಯ ಭಾಗ್ಯ ಹೇಗಿರುತ್ತದೆ ಇಲ್ಲಿದೆ ಡೀಟೈಲ್ಸ್.

ಸಾಮಾನ್ಯವಾಗಿ ಕನ್ಯಾ ರಾಶಿಯವರು ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ತೂಕ ಹೆಚ್ಚಳದಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ 2025 ರಲ್ಲಿ ಕನ್ಯಾ ರಾಶಿಯವರು ಆರೋಗ್ಯದ ವಿಚಾರದಲ್ಲಿ ಉತ್ತಮ ಫಲಗಳನ್ನು ಕಾಣಲಿದ್ದಾರೆ.

ಏಪ್ರಿಲ್ 2025 ರವರೆಗೆ ಗುರು ಮತ್ತು ಶನಿಯ ಅನುಗ್ರಹವಿರಲಿದ್ದು, ಆರೋಗ್ಯದಲ್ಲಿ ಸುಧಾರಣೆಯಿರಲಿದೆ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದರೆ ನಿಯಂತ್ರಣದಲ್ಲಿರುವುದು. ಇದರಿಂದಾಗಿ ನಿಮ್ಮ  ವೈದ್ಯಕೀಯ ಖರ್ಚು  ವೆಚ್ಚಗಳೂ ನಿಯಂತ್ರಣದಲ್ಲಿರಲಿದೆ. ಹಾಗಂತ ಆರೋಗ್ಯ ನಿರ್ಲಕ್ಷ್ಯಿಸುವಂತಿಲ್ಲ.

ವರ್ಷದ ಮಧ್ಯಾವಧಿಯಲ್ಲಿ ನಿಮ್ಮ ಕೆಲವೊಂದು ಅನಾರೋಗ್ಯಕರ ಆಹಾರ ಕ್ರಮದಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಅಕ್ಟೋಬರ್ ಬಳಿಕ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಲಿದ್ದೀರಿ. ವರ್ಷಾಂತ್ಯಕ್ಕೆ ನಿಮ್ಮ ಆರೋಗ್ಯ ಸುಧಾರಿಸಲಿದ್ದು, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?