Select Your Language

Notifications

webdunia
webdunia
webdunia
webdunia

Horoscope 2025: ಕನ್ಯಾ ರಾಶಿಯವರಿಗೆ 2025 ಅಷ್ಟು ಸುಲಭವಲ್ಲ

Astrology

Krishnaveni K

ಬೆಂಗಳೂರು , ಮಂಗಳವಾರ, 19 ನವೆಂಬರ್ 2024 (09:11 IST)
ಬೆಂಗಳೂರು: 2025 ಕನ್ಯಾ ರಾಶಿಯವರ ಪಾಲಿಗೆ ಉದ್ಯೋಗ ಕ್ಷೇತ್ರದಲ್ಲಿ ಎಷ್ಟು ಯಶಸ್ಸು ತಂದುಕೊಡುತ್ತದೆ ಮತ್ತು ಯಾವ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ ಎಂಬ ವಿವರಗಳು ಇಲ್ಲಿದೆ ನೋಡಿ.

2025 ಕನ್ಯಾ ರಾಶಿಯವರ ಪಾಲಿಗೆ ಹೂವಿನ ಹಾದಿಯಾಗಿರುವುದಿಲ್ಲ. ಈ ವರ್ಷ ನಿಮ್ಮ ವೃತ್ತಿ ಜೀವನದಲ್ಲಿ ಸವಾಲುಗಳು ಮತ್ತು ಯಶಸ್ಸು ಎರಡೂ ಮಿಕ್ಸ್ ಆಗಿರುತ್ತದೆ. ನೀವು ಇದನ್ನು ಹೇಗೆ ನಿಭಾಯಿಸುತ್ತೀರಿ ಎಂಬುದೇ ನಿಮ್ಮ ಮುಂದಿರುವ ಸವಾಲು. ಈ ವರ್ಷದ ಆರಂಭದಲ್ಲಿ ಶನಿಯ ದೆಸೆಯಿಂದ ನಿಮ್ಮ ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗಲಿದೆ.

ಮಾರ್ಚ್ ವರೆಗೂ ವೃತ್ತಿ ಜೀವನದಲ್ಲಿ ಕಠಿಣ ಪರಿಸ್ಥಿತಿಯಿರಲಿದೆ. ಆದರೆ ಸಹೋದ್ಯೋಗಿಗಳಿಂದ ಸಹಾಯ ಸಿಗಲಿದೆ ಎಂಬುದು ಸಮಾಧಾನಕರ ವಿಚಾರವಾಗಿದೆ. ವರ್ಷದ ಮಧ್ಯಾವಧಿಯಲ್ಲಿ ಹಣಕಾಶಿನ ಮುಗ್ಗಟ್ಟುಗಳು ಎದುರಾದೀತು. ಉದ್ದಿಮೆದಾರರು ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕೆಲವು ಸಮಯ ಕಾಯುವುದು ಉತ್ತಮ. ನಷ್ಟಗಳಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಮಾತೇ ನಿಮ್ಮ ಬಂಡವಾಳವಾಗಬೇಕಾಗುತ್ತದೆ.

ಆದರೆ ಅಕ್ಟೋಬರ್ ಬಳಿಕ ವರ್ಷಾಂತ್ಯದಲ್ಲಿ ನಿಮ್ಮ ಕಠಿಣ ಸಮಯ ಕಳೆದು ಹೋಗುವುದು. ಉದ್ಯೋಗದಲ್ಲಿ ನಿಧಾನವಾಗಿ ಯಶಸ್ಸು ಕಾಣುತ್ತೀರಿ. ಆರ್ಥಿಕ ಸಮಸ್ಯೆಗಳು ತಕ್ಕಮಟ್ಟಿಗೆ ಪರಿಹಾರವಾಗಲಿದೆ. ಉದ್ದಿಮೆದಾರರಿಗೆ ಬೆಳವಣಿಗೆಗೆ ಹೊಸ ಐಡಿಯಾಗಳು ಹೊಳೆಯಲಿವೆ. ವ್ಯವಹಾರದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ಯಶಸ್ಸು ಅಷ್ಟು ಸುಲಭವಾಗಿ ದೊರಕುವುದಿಲ್ಲ ಎಂಬುದನ್ನು ಈ ಸಮಯದಲ್ಲಿ ಮನಗಾಣುವಿರಿ.

ಈ ರಾಶಿಯವರ ಅದೃಷ್ಟ ಸಂಖ್ಯೆ: 7.

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಈ ಫೀಲ್ಡ್ ನಲ್ಲಿ ಉದ್ಯೋಗದಲ್ಲಿದ್ದರೆ ಯಶಸ್ಸು ಗ್ಯಾರಂಟಿ