Select Your Language

Notifications

webdunia
webdunia
webdunia
webdunia

Horoscope for 2025: ಮಿಥುನ ರಾಶಿಯವರಿಗೆ 2025 ರಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಿರಲಿದೆ

Office

Krishnaveni K

ಬೆಂಗಳೂರು , ಮಂಗಳವಾರ, 19 ನವೆಂಬರ್ 2024 (08:41 IST)
ಬೆಂಗಳೂರು: ಮಿಥುನ ರಾಶಿಯವರಿಗೆ 2025 ನೇ ವರ್ಷ ಉದ್ಯೋಗ, ವೃತ್ತಿ ಕ್ಷೇತ್ರದಲ್ಲಿ ಎಷ್ಟು ಯಶಸ್ಸು ಸಿಗುತ್ತದೆ, ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬ ಉದ್ಯೋಗ ರಾಶಿಫಲ ಇಲ್ಲಿದೆ ನೋಡಿ.

ಮಿಥುನ ರಾಶಿಯವರು ಬ್ಯಾಂಕಿಂಗ್, ಡಾಟಾ ಅನಲಿಸ್ಟ್ ಸೇರಿದಂತೆ ಆರ್ಥಿಕ ಕ್ಷೇತ್ರದ ಉದ್ಯೋಗದಲ್ಲಿ ಅತ್ಯಂತ ಯಶಸ್ಸು ಗಳಿಸುತ್ತಾರೆ. ಆದರೆ ಈ ವರ್ಷ ಮಿಥುನ ರಾಶಿಯವರು ಮಿಶ್ರಫಲಗಳನ್ನು ಪಡೆಯಲಿದ್ದಾರೆ. ವರ್ಷಾರಂಭದಲ್ಲಿ ಉದ್ಯೋಗದಲ್ಲಿ ಯಾವುದೇ ಸಮಸ್ಯೆಯಿರದು. ಸಹೋದ್ಯೋಗಿಗಳ ನೆರವು ಸಿಗಲಿದೆ.

ಆದರೆ ಮಾರ್ಚ್ ಬಳಿಕ ಉದ್ಯೋಗದಲ್ಲಿ ಕುಜನ ಪ್ರಭಾವದಿಂದ ಏರಿಳಿತಗಳು ಕಂಡುಬಂದೀತು. ಉದ್ಯೋಗ ಸಂಬಂಧವಾದ ಯಾವುದೇ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳಬಾರದು. ಇದರಿಂದ ಮುಂದೆ ತೊಂದರೆಗೆ ಸಿಲುಕಿಕೊಳ್ಳಬೇಕಾದೀತು. ಜೂನ್ ನಲ್ಲಿ ಕೆಲಸದೊತ್ತಡ ಹೆಚ್ಚಾಗಲಿದೆ.

ವರ್ಷದ ಮಧ್ಯಾವಧಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಮತ್ತು ಉದ್ಯೋಗ ಬದಲಾವಣೆ ಮಾಡುವವರಿಗೆ ಸಾಕಷ್ಟು ಪ್ರಯಾಸಪಡಬೇಕಾಗುತ್ತದೆ. ಅಂದುಕೊಂಡಿದ್ದು ಯಾವುದೂ ಅಷ್ಟು ಸುಲಭವಾಗಿ ಸಿಗದು. ಆದರೆ ವರ್ಷಾಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ.

ಉದ್ದಿಮೆದಾರರಿಗೆ ಹೊಸ ಪ್ರಾಜೆಕ್ಟ್ ಗಳು ಸಿಗಲಿವೆ. ಹೊಸ ಉದ್ಯೋಗ, ವ್ಯವಹಾರದ ಐಡಿಯಾಗಳು ಬರಲಿದೆ. ಸರಿಯಾದ ಯೋಜನೆಯೊಂದಿಗೆ ಮುಂದುವರಿದರೆ ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇವತಾ ಪ್ರಾರ್ಥನೆ ಮಾಡುವುದು ಮುಖ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?