Select Your Language

Notifications

webdunia
webdunia
webdunia
webdunia

Horoscope 2025: ವೃಶ್ಚಿಕ ರಾಶಿಯವರ ಆರೋಗ್ಯ ಆರಂಭದಲ್ಲಿದ್ದಂತೆ ಕೊನೆಯವರೆಗೂ ಇರಲ್ಲ

Astrology

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (09:02 IST)
ಬೆಂಗಳೂರು: 2025 ರ ಈ ವರ್ಷ ವೃಶ್ಚಿಕ ರಾಶಿಯವರ ಆರೋಗ್ಯ ಸ್ಥಿತಿ ವರ್ಷಾರಂಭದಲ್ಲಿದ್ದಂತೆ ಕೊನೆಯವರೆಗೂ ಇರುತ್ತದೆ ಎಂದು ಹೇಳಲಾಗದು. ವೃಶ್ಚಿಕ ರಾಶಿಯವರ ಆರೋಗ್ಯ ಫಲ ಹೇಗಿರುತ್ತದೆ ನೋಡಿ.

ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಅಸಿಡಿಟಿ, ಕೆಲವು ಅಂಗಾಂಗಳ ತೊಂದರೆಗಳು, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. 2025 ನೇ ವರ್ಷ ವೃಶ್ಚಿಕ ರಾಶಿಯವರ ಪಾಲಿಗೆ ಸುಖ ಮತ್ತು ದುಃಖದ ಸಮ್ಮಿಲನವಾಗಿರಲಿದೆ.

ವರ್ಷಾರಂಭದಲ್ಲಿ ವೃಶ್ಚಿಕ ರಾಶಿಯವರ ಆರೋಗ್ಯ ಸ್ಥಿತಿ ಉತ್ತಮ ಸ್ಥಿತಿಯಲ್ಲಿರಲಿದೆ. ವೈದ್ಯಕೀಯ ಖರ್ಚು ವೆಚ್ಚಗಳು ಕಡಿಮೆಯಿರಲಿದೆ. ಮಧುಮೇಹಿಗಳಿಗೆ, ರಕ್ತದೊತ್ತಡ ಇರುವವರಿಗೆ ಎಲ್ಲವೂ ನಿಯಂತ್ರಣದಲ್ಲಿದ್ದಂತೆ ಅನಿಸುವುದು.

ಮೇ ಬಳಿಕ ಕೆಲವೊಂದು ಕೌಟುಂಬಿಕ ಕಾರಣಗಳಿಂದಾಗಿ, ಆರ್ಥಿಕ ಸಮಸ್ಯೆಗಳಿಂದಾಗಿ ಮಾನಸಿಕವಾಗಿ ಒತ್ತಡ, ಆತಂಕ ಸಮಸ್ಯೆಗಳು ಕಂಡುಬಂದೀತು. ನಿದ್ರಾಹೀನತೆಯ ಸಮಸ್ಯೆಯೂ ಬಂದೀತು. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಬೇಕಾಗುತ್ತದೆ.

ಆದರೆ ವರ್ಷಾಂತ್ಯದಲ್ಲಿ ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಸುಧಾರಣೆ ಕಂಡುಬರುವುದು. ಒತ್ತಡ ನಿಭಾಯಿಸುವಂತಹ ಅಭ್ಯಾಸ, ಜೀವನ ಕ್ರಮವನ್ನು ಅಳವಡಿಸಿಕೊಳ್ಳುವುದು ಸೂಕ್ತ. ಒಟ್ಟಾರೆಯಾಗಿ ಹೇಳುವುದಾದರೆ ವೃಶ್ಚಿಕ ರಾಶಿಯವರಿಗೆ 2025 ನೇ ವರ್ಷ ಎಚ್ಚರಿಕೆಯಿಂದಿರಬೇಕಾದ ವರ್ಷವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಪದೇ ಪದೇ ಕೈ ಕೊಡುತ್ತದೆ