Select Your Language

Notifications

webdunia
webdunia
webdunia
webdunia

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಗ್ರಹಗಳ ಅನುಗ್ರಹ ದೊರೆಯುತ್ತದೆ ಗೊತ್ತಾ?

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಗ್ರಹಗಳ ಅನುಗ್ರಹ ದೊರೆಯುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (07:15 IST)
ಬೆಂಗಳೂರು : ನಾವು ಧರಿಸುವ ಬಟ್ಟೆಗಳ ಬಣ್ಣಗಳಿಗನುಸಾರವಾಗಿ ನಮಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಆದಕಾರಣ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ.

*ಭಾನುವಾರದಂದು ಸೂರ್ಯ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಸೂರ್ಯನ ಸಂಪೂರ್ಣ ಅನುಗ್ರಹವಾಗುತ್ತದೆ. ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ.
*ಸೋಮವಾರದಂದು ಚಂದ್ರ ವಹಿಸುತ್ತಾನೆ. ಆದಕಾರಣ ಅಂದು ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಚಂದ್ರನ ಅನುಗ್ರಹದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
*ಮಂಗಳವಾರ ಕುಜ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಕುಜನ ಅನುಗ್ರಹದಿಂದ ನಾಯಕತ್ವದ ಗುಣ ಹೆಚ್ಚುತ್ತದೆ.
*ಬುಧವಾರ ಬುಧ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಹಸಿರು ಬಣ್ಣದ ಬಟ್ಟೆ ಧರಿಸಿದರೆ ಬುಧನ ಅನುಗ್ರಹದಿಂದ ಭೂ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
* ಗುರುವಾರ ಗುರು ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಹಳದಿ ಬಣ್ಣದ ಬಟ್ಟೆ ಧರಿಸಿದರೆ ಗುರುವಿನ ಅನುಗ್ರಹ ದೊರೆಯುತ್ತದೆ.
*ಶುಕ್ರವಾರ ಶುಕ್ರ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಶುಕ್ರನ ಅನುಗ್ರಹವಾಗುತ್ತದೆ.
*ಶನಿವಾರ ಶನಿ ಅಧಿಪತ್ಯವನ್ನು ವಹಿಸುತ್ತಾನೆ. ಆದಕಾರಣ ಅಂದು ನೀಲಿ ಬಣ್ಣದ ಬಟ್ಟೆ ಧರಿಸಿದರೆ ಶನಿಯ ಅನುಗ್ರಹದಿಂದ ಎಲ್ಲಾ ಕೆಲಸ ಯಶಸ್ಸು ಕಾಣುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಷ್ಟ ಐಶ್ವರ್ಯ ಪ್ರಾಪ್ತಿಯಾಗಲು ಬಿಲ್ವ ಪತ್ರೆಯ ಮರದ ಕೆಳಗೆ ಹೀಗೆ ಮಾಡಿ