Select Your Language

Notifications

webdunia
webdunia
webdunia
webdunia

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಯೋಗ ಸಹಾಯಕ

Yoga

Krishnaveni K

ಬೆಂಗಳೂರು , ಮಂಗಳವಾರ, 12 ಮಾರ್ಚ್ 2024 (11:30 IST)
ಬೆಂಗಳೂರು: ಯೋಗದ ಮೂಲಕ ನಾವು ಅನೇಕ ರೋಗಗಳನ್ನು ತಡೆಗಟ್ಟಬಹುದು. ಅದೇ ರೀತಿ ಶರೀರಕ್ಕೆ ಯಾವುದೇ ರೋಗ
Photo Courtesy: Twitter
ಬಾರದಂತೆ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸಿಕೊಳ್ಳಬಹುದು. ಹಾಗಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಯೋಗ ಯಾವುದು ನೋಡೋಣ.

ವಾತಾವರಣದಲ್ಲಿನ ಬದಲಾವಣೆ, ಆಹಾರ ಬದಲಾವಣೆಯಿಂದ ನಾವು ಪಕ್ಕನೇ ರೋಗಕ್ಕೆ ತುತ್ತಾಗುತ್ತೇವೆ. ಅದರಲ್ಲೂ ಕೊರೋನಾ ಬಂದ ಮೇಲಂತೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೇ ಕುಂಠಿತವಾಗಿದೆ. ಇದರಿಂದಾಗಿ ಬೇಗನೇ ರೋಗಕ್ಕೆ ತುತ್ತಾಗುತ್ತಿದ್ದೇವೆ.

ಬೇಗನೇ ರೋಗಕ್ಕೆ ತುತ್ತಾಗದಂತೆ ಅಥವಾ ರೋಗ ಬಂದರೆ ಬೇಗನೇ ಅದು ವಾಸಿಯಾಗಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಬೇಕು. ಇದಕ್ಕೆ ಯೋಗಾಸನಗಳ ಪೈಕಿ ಮಂಡೂಕಾಸನ ಸಹಾಯ ಮಾಡಬಲ್ಲದು. ಅದನ್ನು ಮಾಡುವುದು ಹೇಗೆ ಇಲ್ಲಿ ನೋಡಿ.

ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳಿ.
ಹೆಬ್ಬೆರಳನ್ನು ಮಡಚಿ ಅಂಗೈಯೊಳಗಿಡಿ
ಈಗ ಎರಡೂ ಅಂಗೈ ಮುಷ್ಠಿಯನ್ನು ಹೊಕ್ಕುಳದ ಬಳಿ ತನ್ನಿ
ಉಸಿರು ಹೊರಬಿಡುತ್ತಾ ಸೊಂಟದ ಭಾಗದಿಂದ ಮುಂದಕ್ಕೆ ಬಗ್ಗಿ
ನಿಮ್ಮ ಎರಡೂ ಮುಷ್ಠಿಗಳು ಹೊಕ್ಕುಳದ ಭಾಗವನ್ನು ಒತ್ತಿ ಇರಬೇಕು
ಭಾಗಿದ ಸ್ಥಿತಿಯಲ್ಲೇ ಉಸಿರು ಒಳಗೆ ತೆಗೆದುಕೊಂಡು ಮುಖವನ್ನು ನೇರ ಮುಂಭಾಗಕ್ಕೆ ನೋಡುವಂತೆ ಮಾಡಿ

ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಬಲವಾಗುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಊಟದ ನಂತರ ಸಿಹಿ ತಿಂದರೆ ದಪ್ಪಗಾಗುತ್ತೇವಾ ಅನುಮಾನವಿದ್ದರೆ ಇಲ್ಲಿ ನೋಡಿ