ಬೆಂಗಳೂರು: ನಾವು ಸಾಧಾರಣವಾಗಿ ಪ್ರತಿನಿತ್ಯ ಬಳಸುವ ಬ್ರಷ್ ಕಿತ್ತು ಹೋಗುವವರೆಗೂ ಬಳಸುತ್ತೇವೆ. ಆದರೆ ಅದನ್ನು ನಿಯಮಿತವಾಗಿ ಬದಲಾಯಿಸದೇ ಇದ್ದರೆ ಅದರಿಂದ ಖಾಯಿಲೆ ಹರಡಬಹುದು ಎಂದು ನಿಮಗೆ ತಿಳಿದಿರಲಿ.
ನಾವು ಪ್ರತಿನಿತ್ಯ ಬಳಸುವ ಬ್ರಷ್ ಬಗ್ಗೆ ನಾವು ಅಷ್ಟೊಂದು ಗಮನ ಕೊಡುವುದಿಲ್ಲ. ಅದು ಕಿತ್ತು ಇನ್ನೇನು ಹಲ್ಲು ನೋವು ಬರುತ್ತದೆ ಎನ್ನುವವರೆಗೆ ಅದನ್ನು ಬಳಕೆ ಮಾಡುತ್ತಲೇ ಇರುತ್ತೇವೆ. ಆದರೆ ನಮ್ಮ ಈ ಅಭ್ಯಾಸ ನಮಗೆ ರಹಸ್ಯವಾಗಿ ಕೆಲವೊಂದು ರೋಗ ಹರಡುವುದಕ್ಕೆ ಕಾರಣವಾಗಬಹುದು.
ನಮ್ಮ ಆರೋಗ್ಯ ಚೆನ್ನಾಗಿರಲು ಮೌಖಿಕ ಶುಚಿತ್ವ ತುಂಬಾ ಮುಖ್ಯ. ಟೂತ್ ಬ್ರಷ್ ಮುರಿದಿದ್ದರೆ ಅದರ ಬ್ರಷ್ ಪಾರ್ಟ್ ಹಾಳಾಗಿದ್ದರೆ ಕೂಡಲೇ ಅದನ್ನು ಬದಲಾಯಿಸಬೇಕು. ತಜ್ಞರ ಪ್ರಕಾರ ಕನಿಷ್ಠ 3 ರಿಂದ 4 ತಿಂಗಳಿಗಿಂತ ಹೆಚ್ಚು ಒಂದು ಬ್ರಷ್ ನ್ನು ಬಳಸಬಾರದು. ಬ್ರಷ್ ಹಾಳಾದಂತೆ ಅದರಿಂದ ಹಲ್ಲುಜ್ಜುವುದರಿಂದ ಯಾವುದೇ ಪ್ರಯೋಜನವೂ ಆಗದು. ಇದರಿಂದ ಮೌಖಿಕವಾಗಿ ಬರುವ ಖಾಯಿಲೆಗಳು ಬರುವ ಸಾಧ‍್ಯತೆಯಿದೆ.
ಅದೇ ರೀತಿ ಯಾವುದಾದರೂ ಸೋಂಕು ರೋಗಗಳಿಗೆ ತುತ್ತಾಗಿದ್ದರೆ ಅದು ಗುಣವಾದ ನಂತರವೂ ಅದೇ ಬ್ರಷ್ ಬಳಸಬೇಡಿ. ಇದರಿಂದ ಮತ್ತೆ ಮತ್ತೆ ಅದೇ ಖಾಯಿಲೆ ಬರುವ ಸಾಧ್ಯೆಯಿದೆ. ಅದೇ ರೀತಿ ರೂಟ್ ಕೆನಾಲ್, ಸರ್ಜರಿಯಂತಹ ಹಲ್ಲಿಗೆ ಸಂಬಂಧಪಟ್ಟ ಥೆರಪಿ ಮಾಡಿದ ಬಳಿಕವೂ ಬ್ರಷ್ ಬದಲಾಯಿಸಬೇಕು. ಅಲ್ಲದೆ ನಾವು ಪ್ರಯಾಣ ಮಾಡುವಾಗ ಬಳಸಿದ ಬ್ರಷ್ ನ್ನು ಮತ್ತೆ ಬಳಕೆ ಮಾಡಿದರೆ ಖಾಯಿಲೆಗೆ ದಾರಿ ಮಾಡಿಕೊಟ್ಟಂತೆ. ಮಕ್ಕಳ ಬ್ರಷ್ ವಿಚಾರದಲ್ಲಂತೂ ಈ ನಿಯಮಗಳನ್ನು ತಪ್ಪದೇ ಪಾಲಿಸಿ.