Photo Courtesy: Instagram
ಬೆಂಗಳೂರು: ನಮ್ಮ ದೈನಂದಿನ ಜೀವನ ಶೈಲಿಯಿಂದಾಗಿ ಹೊಟ್ಟೆಯ ಬೊಜ್ಜು ತಾನಾಗಿಯೇ ಬೆಳೆಯುತ್ತದೆ ಮತ್ತು ಇದರಿಂದ ನಮ್ಮ ದೇಹ ಅಸಹ್ಯವಾಗಿ ಕಾನುತ್ತದೆ. ಇದು ಕೆಲವರಲ್ಲಿ ಕೀಳರಿಮೆಗೆ ಕಾರಣವಾಗುತ್ತದೆ.
ಬಹುತೇಕರು ಒಂದು ವಯಸ್ಸು ದಾಟಿದ ಮೇಲೆ ಬೆಲ್ಲಿ ಫ್ಯಾಟ್ ಸಮಸ್ಯೆಗೊಳಗಾಗುತ್ತಾರೆ. ಹೊಟ್ಟೆಯ ಬೊಜ್ಜು ಕರಗಲು ಏನೇನೋ ಸರ್ಕಸ್ ಮಾಡುವ ಬದಲು ನಮ್ಮ ಜೀವನ ಶೈಲಿಯಲ್ಲೇ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಸರಿಹೋಗುತ್ತದೆ. ಬೆಲ್ಲಿ ಫ್ಯಾಟ್ ಕರಗಿಸಲು ಕೆಲವೊಂದು ಆಯುರ್ವೇದಿಕ್ ಪರಿಹಾರಗಳಿದ್ದು, ಅವು ಯಾವುವು ಎಂದು ನೋಡೋಣ. ಇದರಿಂದ ಯಾವುದೇ ಅಡ್ಡ ಪರಿಣಾಮವೂ ಇರಲ್ಲ. ಅದಕ್ಕೆ ಎರಡು ಸಿಂಪಲ್ ರೆಸಿಪಿ ಇಲ್ಲಿ ಹೇಳಲಾಗಿದೆ. ಇದನ್ನು ಫಾಲೋ ಮಾಡಿ ನೋಡಿ.
ದಾಲ್ಚಿನ್ನಿ: ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ದಾಲ್ಚಿನಿಯ ನೀರಿನಿಂದ ಬೆಲ್ಲಿ ಫ್ಯಾಟ್ ಕರಗಿಸುವ ಪಾನೀಯ ಮಾಡಬಹುದು. ದಾಲ್ಚಿನಿ ಕೇವಲ ಹೊಟ್ಟೆಯ ಬೊಜ್ಜು ಮಾತ್ರವಲ್ಲ, ದೇಹ ತೂಕ ಇಳಿಸಲೂ ಸಹಾಯ ಮಾಡುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ದಾಲ್ಚಿನಿ ಹಾಕಿದ ನೀರು ಅಥವಾ ಚಹಾ ಸೇವನೆ ಮಾಡಿ.
ಮೆಂತ್ಯ: ಮೆಂತ್ಯದ ಕಾಳು ಯಾರ ಮನೆಯಲ್ಲಿ ಇರಲ್ಲ ಹೇಳಿ. ಸಾಮಾನ್ಯವಾಗಿ ನಾವು ಅಡುಗೆಗೆ ಬಳಕೆ ಮಾಡುವ ಮೆಂತ್ಯದ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇಲ್ಲವೇ ಮೆಂತ್ಯ ಕಾಳುಗಳನ್ನು ಜಗಿದರೂ ಸಮಸ್ಯೆಯಿಲ್ಲ. ಮೆಂತ್ಯದಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಇದು ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.