Select Your Language

Notifications

webdunia
webdunia
webdunia
webdunia

ಹೊಟ್ಟೆಯ ಬೊಜ್ಜು ಕರಗಿಸಲು ಈ ಯೋಗಾಸನ ಬೆಸ್ಟ್

Ustrasana

Krishnaveni K

ಬೆಂಗಳೂರು , ಶನಿವಾರ, 24 ಫೆಬ್ರವರಿ 2024 (12:28 IST)
ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ವಿಶೇಷವಾಗಿ ಮಹಿಳೆಯರಿಗೆ ಹೊಟ್ಟೆಯ ಬೊಜ್ಜು ಅಥವಾ ಬೆಲ್ಲಿ ಫ್ಯಾಟ್ ಚಿಂತೆಗೆ ಕಾರಣವಾಗುತ್ತದೆ.

ಹೊಟ್ಟೆಯಲ್ಲಿ ಬೊಜ್ಜು ಶೇಖರೆಣೆಯಾಗುವುದರಿಂದ ಅಂದಗೆಡುತ್ತದೆ ಎಂಬ ಚಿಂತೆಯಿರುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ನಾವು ಸೇವಿಸುವ ಆಹಾರ ಮತ್ತು ಜೀವನ ಶೈಲಿಯೂ ಕಾರಣ. ಆರೋಗ್ಯಕರವಲ್ಲದ, ಜಿಡ್ಡುಯುಕ್ತ, ಫಾಸ್ಟ್ ಫುಡ್ ಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಅದೇ ರೀತಿ ದೇಹಕ್ಕೆ ವ್ಯಾಯಾಮ ನೀಡಬೇಕು. ಬೆಲ್ಲಿ ಫ್ಯಾಟ್ ಕರಗಲು ನಾವು ಪ್ರತಿನಿತ್ಯ ಒಂದು ಸಿಂಪಲ್ ಯೋಗಾಸನ ಮಾಡಬಹುದು. ಅದು ಉಸ್ಟ್ರಾಸನವಾಗಬಹುದು. ಉಸ್ಟ್ರಾಸನ ಹೊಟ್ಟೆಗೆ ಹೆಚ್ಚು ಚಟವಟಿಕೆ ನೀಡುತ್ತದೆ. ಇದರಿಂದ ಹೊಟ್ಟೆಯ ಭಾಗದಲ್ಲಿ ಶೇಖರೆಯಾಗುವ ಬೊಜ್ಜು ಕರಗಿ ಸ್ಲಿಮ್ ಆಗಿ ಕಾಣಿಸುತ್ತೀರಿ.

ಉಸ್ಟ್ರಾಸನ
ಮೊಣಕಾಲಿಗೆ ಬಲ ಹಾಕಿ ಮ್ಯಾಟ್ ನ ಮೇಲೆ ಕಾಲು ಹಿಂದಕ್ಕೆ ಹಾಕಿ ಕುಳಿತುಕೊಳ್ಳಿ. ನಿಮ್ಮ ಎರಡೂ ಕೈಗಳು ಸೊಂಟದ ಮೇಲಿರಲಿ. ಬಳಿಕೆ ಮೆಲ್ಲನೆ ಹಿಂದಕ್ಕೆ ಬಾಗಿ. ಈಗ ನಿಮ್ಮ ಕೈಗಳು ಹಿಂಗಾಲನ್ನು ಟಚ್ ಮಾಡುವಂತಿರಲಿ. ನಿಮ್ಮ ಅಂಗಾಲಿಗೆ ನೇರವಾಗುವಷ್ಟು ತಲೆ ಮತ್ತು ಬೆನ್ನು ಬಾಗಿಸಿ. ಕೆಲವು ಕಾಲ ಹೀಗೇ ಉಸಿರು ಬಿಗಿ ಹಿಡಿದು ನಿಲ್ಲಿ. ಬಳಿಕ ನಿಧಾನಕ್ಕೆ ಉಸಿರು ತೆಗೆದು  ಮೊದಲಿನ ಹಂತಕ್ಕೆ ಬನ್ನಿ. ಮತ್ತೆ ನಿಮ್ಮ ಎರಡೂ ಕೈಗಳನ್ನು ಸೊಂಟದ ಮೇಲಿಡಿ. ಇದೇ ರೀತಿ ನಾಲ್ಕೈದು ಬಾರಿ ಪ್ರತಿನಿತ್ಯ ಮಾಡಿದರೆ ಬೆಲ್ಲಿ ಫ್ಯಾಟ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಶಿಯಲ್ ಹೇರ್ ತೆಗೆಯಲು ಸಿಂಪಲ್ ಫೇಸ್ ಪ್ಯಾಕ್