Webdunia - Bharat's app for daily news and videos

Install App

ಮದುವೆಗೂ ಮುನ್ನ ಈ 9 ವಿಷಯಗಳು ಗೊತ್ತಿದ್ದರೆ ಲೈಫ್ ಸೂಪರ್ ಆಗಿರುತ್ತೆ

Webdunia
ಮಂಗಳವಾರ, 24 ಆಗಸ್ಟ್ 2021 (09:05 IST)
things to know before getting marriage: ವಿವಾಹಕ್ಕೂ ಮುನ್ನ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಹೇಗೆ? ದಾಂಪತ್ಯ ಜೀವನವನ್ನು ಸುಗಮವಾಗಿ ಕೊಂಡೊಯ್ಯುವುದು ಹೇಗೆ? ವಿವಾಹಕ್ಕೂ ಮುನ್ನ ನೀವು ಅರಿತುಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..

ವಿವಾಹವೆಂಬ ಅನುಬಂಧ ಗಂಡು ಹೆಣ್ಣಿನ ನಡುವಿನ ಪವಿತ್ರ ಸಂಬಂಧದ ಸಂಕೇತ  ಮಾತ್ರವಲ್ಲದೆ ಪರಸ್ಪರರು ಜೀವನ ಪರ್ಯಂತ ಮಾಡುವ ಪ್ರೀತಿಯ ಒಪ್ಪಂದವೂ ಹೌದು. ಕಷ್ಟ ಸುಖದಲ್ಲಿ ಪರಸ್ಪರ ಬೆಂಬಲಿಗರಾಗಿರುತ್ತೇವೆ, ಪರಸ್ಪರರನ್ನು ಗೌರವಿಸುತ್ತೇವೆ, ಪರಸ್ಪತ ಜೊತೆಗಾರರಾಗಿರುತ್ತೇವೆ ಎಂದು ಮಾಡಿಕೊಳ್ಳುವ ವಾಗ್ವಾದವಾಗಿದೆ. ವಿವಾಹಕ್ಕೂ ಮುನ್ನ ಕೆಲವೊಂದು ಸಲಹೆಗಳು ಹಾಗೂ ಸಮಾಲೋಚನೆ ಅತಿಮುಖ್ಯವಾಗಿರುತ್ತದೆ. ಆಧುನಿಕ ಯುಗದಲ್ಲಿ ಅದೆಷ್ಟೋ ವಿವಾಹಗಳು ವರ್ಷಾಂತ್ಯದೊಳಗೆ ಮುರಿದು ಬಿದ್ದಿರುವ ಘಟನೆಗಳಿವೆ. ಇನ್ನು ಕೆಲವೆಡೆ ಅರ್ಧದಲ್ಲಿಯೇ ಸಮಾಪ್ತಿಗೊಂಡಿರುವ ಉದಾಹರಣೆಗಳಿವೆ. ಹೀಗೆ ವೈವಾಹಿಕ ಸಮಸ್ಯೆಗಳಿಂದಾಗಿ ಅದೆಷ್ಟೋ ಮಕ್ಕಳು ತಂದೆ ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದಿದೆ. ಹೀಗಾಗಿ ಇಂದಿನ ಕಾಲಘಟ್ಟದಲ್ಲಿ ವಿವಾಹಕ್ಕೂ ಮುನ್ನ ತೆರೆದ ಮನಸ್ಸಿನ ಯೋಚನೆ ಯೋಜನೆ ಮುಖ್ಯವಾಗಿರುತ್ತದೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.
ವಿವಾಹಕ್ಕೂ ಮುನ್ನ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಹೇಗೆ? ದಾಂಪತ್ಯ ಜೀವನವನ್ನು ಸುಗಮವಾಗಿ ಕೊಂಡೊಯ್ಯುವುದು ಹೇಗೆ? ವಿವಾಹಕ್ಕೂ ಮುನ್ನ ನೀವು ಅರಿತುಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
1. ನಿಮ್ಮ ಸಂಗಾತಿ ನಿಮ್ಮನ್ನು ಪರಿಪೂರ್ಣಗೊಳಿಸುವುದಿಲ್ಲ:
ಹೌದು ನಿಮ್ಮನ್ನು ನೀವು ಅರಿತುಕೊಂಡಾಗ ಮಾತ್ರವೇ ನಿಮ್ಮ ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಮೇಲೆ ಅವಲಂಬಿಸದೇ ನಿಮ್ಮದೇ ಆದ ಸ್ವಂತಿಕೆ ಸ್ಥಾಪಿಸಿಕೊಳ್ಳಿ. ಆಗ ಮಾತ್ರವೇ ದಾಂಪತ್ಯ ಸುಗಮವಾಗಿರಲು ಸಾಧ್ಯ.
2. ನಿರೀಕ್ಷೆಗಳ ಬಗ್ಗೆ ಹಿಡಿತವಿರಲಿ:
ನಿಮ್ಮ ಬಾಳಲ್ಲಿ ಬರುವ ಜೀವನ ಸಂಗಾತಿಯಿಂದ ನೀವು ಬಹಳಷ್ಟನ್ನು ನಿರೀಕ್ಷಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ನಿರೀಕ್ಷೆಗಳ ಬಗ್ಗೆ ನಿಮ್ಮ ಹಿಡಿತ ಅತ್ಯಗತ್ಯವಾದುದು. ನಿಮ್ಮ ನಿರೀಕ್ಷೆಗಳು ನಿಮ್ಮ ಸಂಗಾತಿಗೆ ಹೊರೆಯಾಗದಿರಲಿ. ಅವರ ಆಯ್ಕೆಗಳಿಗೆ ಹಾಗೂ ಸ್ವಾತಂತ್ರ್ಯಗಳಿಗೆ ಬೆಲೆ ನೀಡಿ.
3. ಪ್ರೀತಿಯ ನಶೆ ತಲೆಗೆ ಏರದಿರಲಿ:
ವಿವಾಹವಾದ ಹೊಸದರಲ್ಲಿ ಹಾಗೂ ಕೆಲವು ತಿಂಗಳುಗಳ ನಂತರ ದಾಂಪತ್ಯದಲ್ಲಿ ಮಾರ್ಪಾಡುಗಳಾಗುವುದು ಸಹಜವಾಗಿರುತ್ತದೆ. ವಿವಾಹದ ಆರಂಭದಲ್ಲಿ ನಿಮ್ಮ ಸಂಗಾತಿ ಹೇಗೆ ಇದ್ದರೋ ನಂತರವೂ ಹಾಗೆಯೇ ಇರಬೇಕೆಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಅದನ್ನು ಬದಲಾಯಿಸಿಕೊಳ್ಳಿ. ಅವರ ಬದಲಾವಣೆಯನ್ನು ಸ್ವೀಕರಿಸಿಕೊಳ್ಳಿ ಹಾಗೂ ಅವರನ್ನು ಅರ್ಥೈಸಿಕೊಳ್ಳಿ.
4. ಸಂಗಾತಿಯ ಕೌಟುಂಬಿಕ ಅನುಬಂಧ ಅತಿಮುಖ್ಯವಾದುದು:
ಸಂಗಾತಿ ತನ್ನ ಕುಟುಂಬದೊಂದಿಗೆ ಹೇಗೆ ಬೆರೆತಿದ್ದಾರೆ ಎಂಬುದನ್ನು ಅರಿತುಕೊಳ್ಳಿ. ಯಾಕೆಂದರೆ ಸಂಗಾತಿಗಳ ನಡುವೆ ಅವರ ಕುಟುಂಬಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಆಪ್ತ ಸಮಾಲೋಚನೆ, ಉತ್ತಮ ಸಂಬಂಧದ ರಚನೆ ಹೀಗೆ ಸಂಗಾತಿಗಳ ಪರಸ್ಪರ ಕುಟುಂಬಗಳೊಂದಿಗೆ ಅನ್ಯೋನ್ಯತೆ ಇದ್ದಲ್ಲಿ ಮಾತ್ರವೇ ಅನುಬಂಧದಲ್ಲಿ ಉತ್ತಮ ಸ್ವಾಸ್ಥ್ಯವಿರುತ್ತದೆ.
5. ಸಂಗಾತಿಯ ಆರ್ಥಿಕ ಸ್ಥಿತಿ ಅರಿತುಕೊಳ್ಳಿ:
ವಿವಾಹಕ್ಕೂ ಮುನ್ನ ಪರಸ್ಪರರ ಆರ್ಥಿಕ ನೆಲೆಗಟ್ಟನ್ನು ಅವಲೋಕಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿಯನ್ನು ಪರಸ್ಪರರು ಹೇಗೆ ನಿಭಾಯಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಿ. ಕುಟುಂಬದಲ್ಲಿ ಆರ್ಥಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಆರ್ಥಿಕ ಸಮಾಲೋಚನೆಯೂ ವಿವಾಹದ ಸಮಯದಲ್ಲಿ ಮುಖ್ಯವಾಗಿರುತ್ತದೆ.
6. ಸಂಘರ್ಷವನ್ನು ಸುಲಭವಾಗಿ ಪರಿಹರಿಸಿಕೊಳ್ಳಿ:
ವಿವಾಹಕ್ಕೂ ಮುನ್ನ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಎಂದರೆ ಯಾವುದೇ ರೀತಿಯ ಸಂಘರ್ಷ, ಕಲಹ, ವಾಗ್ವಾದವನ್ನು ಬಗೆಹರಿಸಿಕೊಳ್ಳುವುದಾಗಿದೆ. ಯಾವುದೇ ಸಂಘರ್ಷದಲ್ಲಿ ಪರಿಹಾರ ಮುಖ್ಯವಾಗಿರುತ್ತದೆ. ಹಾಗಾಗಿ ಪರಿಹಾರಕ್ಕೆ ಪ್ರಾಮುಖ್ಯತೆ ನೀಡಿ
7. ವಿಶ್ವಾಸವೇ ದಾಂಪತ್ಯದ ಬುನಾದಿ:
ವಿವಾಹ ಸಮಯದಲ್ಲಿ ಪರಸ್ಪರರು ನೀಡುವ ವಿಶ್ವಾಸವನ್ನು ಕೊನೆಯವರೆಗೂ ನಿಭಾಯಿಸಿಕೊಂಡು ಹೋಗುವುದು ಯಶಸ್ವಿ ದಾಂಪತ್ಯದ ಗುಟ್ಟಾಗಿದೆ. ವಿವಾಹದ ಮೊದಲೇ ಆಗಿರಲಿ, ನಂತರವೂ ಆಗಿರಲಿ ಸಂಗಾತಿಯ ನಡುವೆ ವಿಶ್ವಾಸ ಎಂಬುದು ಬುನಾದಿಯಾಗಿರುತ್ತದೆ. ವಿಶ್ವಾಸ ಇಲ್ಲದೇ ಹೋದಲ್ಲಿ ಆ ದಾಂಪತ್ಯ ಅಥವಾ ಯಾವುದೇ ಸಂಬಂಧ ದೀರ್ಘಕಾಲ ಬಾಳುವುದಿಲ್ಲ.
8. ದಾಂಪತ್ಯದ ವಿರಸಗಳನ್ನು ಅಭಿವೃದ್ಧಿಗೆ ಬಳಸಿಕೊಳ್ಳಿ:
ದಾಂಪತ್ಯದಲ್ಲಿ ವಿರಸಗಳು ಮೂಡಿದಾಗ ಅದನ್ನು ಪರಿಹರಿಸಿಕೊಳ್ಳಬೇಕು ಹಾಗೂ ಅದರಲ್ಲಿ ಬೆಳವಣಿಗೆ ಹೊಂದಬೇಕು. ಬದಲಿಗೆ ವಿಚ್ಛೇದನದಂತಹ ತೀರ್ಮಾನಗಳನ್ನು ಸಣ್ಣ ಸಣ್ಣ ವಿಷಯಕ್ಕೂ ತೆಗೆದುಕೊಳ್ಳಬಾರದು ಎಂಬುದು ಕೌಟುಂಬಿಕ ಅಧ್ಯಯನಕಾರರ ಸಲಹೆಯಾಗಿದೆ.
9. ಪ್ರೀತಿಯನ್ನು ವ್ಯಕ್ತಪಡಿಸಿ:
ಪ್ರೀತಿಯನ್ನು ವ್ಯಕ್ತಪಡಿಸುವುದು ಎಂದರೆ ಪರಸ್ಪರರ ನಂಬಿಕೆ, ಸ್ವಾತಂತ್ರ್ಯ, ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಾಗಿದೆ. ಬೆಳಗ್ಗಿನ ವ್ಯಾಯಾಮ ಜೊತೆಯಾಗಿ ಮಾಡುವುದು, ಆಗಾಗ್ಗೆ ಚಿಕ್ಕಪುಟ್ಟ ಸಂಭಾಷಣೆಗಳನ್ನು ನಡೆಸುವುದು, ಸಂಗಾತಿಯ ಕಚೇರಿ ವಿಷಯಗಳನ್ನು ತಿಳಿದುಕೊಳ್ಳುವುದು ಇತ್ಯಾದಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments