Select Your Language

Notifications

webdunia
webdunia
webdunia
webdunia

ಪದೇ ಪದೇ IVF ವಿಫಲವಾಗುದೆಯಾ? ಹಾಗಾದ್ರೆ ಅದಕ್ಕೆ ಈ ಅಂಶಗಳು ಕಾರಣವಾಗಿರಬಹುದು

ಪದೇ ಪದೇ IVF ವಿಫಲವಾಗುದೆಯಾ? ಹಾಗಾದ್ರೆ ಅದಕ್ಕೆ ಈ ಅಂಶಗಳು ಕಾರಣವಾಗಿರಬಹುದು
ಬೆಂಗಳೂರು , ಬುಧವಾರ, 8 ಸೆಪ್ಟಂಬರ್ 2021 (08:38 IST)
Pregnancy: ಅನೇಕ ಬಾರಿ, ಗರ್ಭಧಾರಣೆಯಾಗುತ್ತದೆ ಕಾರಣವೇ ಇಲ್ಲದೆ ಗರ್ಭಪಾತವಾಗುತ್ತದೆ. ಇದಕ್ಕೆ  ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗುವ ಕೆಲ ಅಂಶಗಳು ಕಾರಣ. ನಮ್ಮ ಜೀವನ ಶೈಲಿ ಪರಿಣಾಮ ಬೀರುತ್ತದೆ ಎಂಬುದನ್ನ ನಾವು ಮರೆಯಬಾರದು.

ನೀವು ಪೋಷಕರಾಗಲು ಪ್ರಯತ್ನ ಮಾಡುತ್ತಿದ್ದು, ಆದರೆ ಪದೇ ಪದೇ IVF ವೈಫಲ್ಯವಾಗುತ್ತಿರುವ ಬಗ್ಗೆ ಬೇಸರವಿದ್ದರೆ, ನೀವು ತಿಳಿದುಕೊಳ್ಳಬೇಕಾದ ವಿಚಾರಗಳು ಹಲವಾರಿದೆ. ಪದೇ ಪದೇ ಉಂಟಾಗುವ IVF ವೈಫಲ್ಯಕ್ಕೆ ಮುಖ್ಯ ಕಾರಣ ಎಂಬುದನ್ನ ತಿಳಿದುಕೊಳ್ಳಬೇಕು. ಇದು  ಗರ್ಭಾಶಯದ ಒಳಭಾಗದಲ್ಲಿ ಉತ್ತಮ ಎಂಡೊಮೆಟ್ರಿಯಮ್ ಲೈನಿಂಗ್ ಇದ್ದಾಗ ಸಂಭವಿಸುತ್ತದೆ ಮತ್ತು ನೀವು ಉತ್ತಮ ಭ್ರೂಣಗಳನ್ನು ಹೊಂದಿದ್ದೀರಿ ಆದರೆ ಅವು ಗರ್ಭಧಾರಣೆಯನ್ನು(Pregnancy) ತಡೆಯಲುಸಾಧ್ಯವಾಗುತ್ತಿಲ್ಲ ಎಂದರೆ ಇದನ್ನು ಐವಿಎಫ್ ವೈಫಲ್ಯ ಎಂದು ಕರೆಯಲಾಗುತ್ತದೆ ಮತ್ತು ಇದು ಎರಡು ಬಾರಿ ಸಂಭವಿಸಿದಾಗ, ಅದರ ಹಿಂದಿನ ಕಾರಣವನ್ನು ನೀವು ತಿಳಿದುಕೊಂಡು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು.
ಐವಿಎಫ್ ವೈಫಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಭ್ರೂಣ ಮತ್ತು ಎಂಡೊಮೆಟ್ರಿಯಮ್  ಒಂದನೊಂದು ಸೇರಿದಾಗ ಇದ್ದಾಗ ಇಂಪ್ಲಾಂಟೇಶನ್ ಸಂಭವಿಸುತ್ತದೆ. ಎಂಡೊಮೆಟ್ರಿಯಂನಲ್ಲಿ (ಗರ್ಭಾಶಯದ ಒಳಪದರ) ಭ್ರೂಣಗಳನ್ನು ಸ್ವೀಕರಿಸಿದಾಗ ಮಾತ್ರ  ಮಹಿಳೆ ಗರ್ಭ ಧರಿಸಬಹುದು. ಆದ್ದರಿಂದ, ಒಂದು  ಬಾರಿ ವೈಫಲ್ಯ ಸಂಭವಿಸಿದಾಗ, ಅದಕ್ಕೆ ನಿರ್ದಿಷ್ಟವಾಗಿ ಕಾರಣವನ್ನು ಹುಡುಕಬಹುದು. ಮೊದಲು ಭ್ರೂಣವನ್ನು ಪರೀಕ್ಷೆ ಮಾಡಬೇಕು. ಏಕೆಂದರೆ ಭ್ರೂಣವು ಉತ್ತಮ ಗುಣಮಟ್ಟವನ್ನು ಹೊಂದಿರಬೇಕು ಹಾಗೂ ಭ್ರೂಣದ ಗುಣಮಟ್ಟವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕು.
3 ನೇ ದಿನದಲ್ಲಿ ಭ್ರೂಣಗಳನ್ನು ವರ್ಗಾಯಿಸಿದರೆ ಬಹುಶಃ ಅವು ಒಳಗೆ ಬೆಳೆಯುವ ಸಾಮರ್ಥ್ಯವಿದೆಯೇ ಎಂಬುದು ತಿಳಿದಿಲ್ಲ. ಆದ್ದರಿಂದ, ಆ ರೋಗಿಗಳಲ್ಲಿ ಬ್ಲಾಸ್ಟೊಸಿಸ್ಟ್ ಡಿ 5 ಭ್ರೂಣ ವರ್ಗಾವಣೆಗೆ ಆದ್ಯತೆ ನೀಡಬೇಕು ಏಕೆಂದರೆ ಈ ಮಾರ್ಗ  ಉತ್ತಮ ಗರ್ಭಧಾರಣೆಗೆ ಸಹಾಯ ಮಾಡುತ್ತದೆ, ಅಲ್ಲದೇ ಇದು ಫೇಲ್ ಆಗುವ ಸಾಧ್ಯತೆ ಕಡಿಮೆ.
ಐವಿಎಫ್ ವೈಫಲ್ಯಕ್ಕೆ ಕೊರೊನಾ ಕಾರಣವಾಗತ್ತಾ?
ಅಂಡಾಣು ಮತ್ತು ವೀರ್ಯಗಳು ಒಂದಕ್ಕೊಂದು ಸೇರಿಕೊಂಡಾಗ ಗ್ಯಾಮೆಟ್ಗಳ ಕಾರಣ ಭ್ರೂಣವು ರೂಪುಗೊಳ್ಳುತ್ತದೆ. ಪುರುಷರ ಅಂಶವಾಗಿರುವ ವೀರ್ಯವನ್ನು ಮೊದಲು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶೇಷವಾಗಿ ಇನ್ನು ಈ ಸಮಯದಲ್ಲಿ ಕೊರನಾ ವೈರಸ್ ವೃಷಣದಲ್ಲಿ ಸೆರ್ಟೋಲಿ ಮತ್ತು ಲೇಡಿಗ್ ಕೋಶಗಳಿಗೆ ಪ್ರವೇಶ ಪಡೆಯುತ್ತದೆ ಎಂದು  ಸಾಬೀತಾಗಿದೆ. ಆದ್ದರಿಂದ, ಕೊರೊನಾ ಸೋಂಕಿಗೆ ತುತ್ತಾಗಿರುವ  ಹೆಚ್ಚು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಯಾವುದೇ ಸೋಂಕು ಕೂಡ ವೀರ್ಯ ಅಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿದ್ದಲ್ಲಿ ಹಾಗೂ ಮಧುಮೇಹವಿದ್ದಲ್ಲಿ  ಕೂಡ ಸಮಸ್ಯೆಯಾಗಬಹುದು.
ಅನೇಕ ಬಾರಿ, ಗರ್ಭಧಾರಣೆಯಾಗುತ್ತದೆ ಕಾರಣವೇ ಇಲ್ಲದೆ ಗರ್ಭಪಾತವಾಗುತ್ತದೆ. ಇದಕ್ಕೆ  ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗುವ ಕೆಲ ಅಂಶಗಳು ಕಾರಣ. ನಮ್ಮ ಜೀವನ ಶೈಲಿ ಪರಿಣಾಮ ಬೀರುತ್ತದೆ ಎಂಬುದನ್ನ ನಾವು ಮರೆಯಬಾರದು. ಆಲ್ಕೋಹಾಲ್, ಧೂಮಪಾನ ಅಥವಾ ತಂಬಾಕು ಸೇವನೆಯಿಂದ ವೀರ್ಯದ ಕೆಟ್ಟ ಮೇಲೆ ಪರಿಣಾಮ ಬೀರುತ್ತದೆ. ವೀರ್ಯದ ಗುಣಮಟ್ಟವನ್ನು ವೀರ್ಯದ ಡಿಎನ್ಎ ಪರೀಕ್ಷೆಯ ಸಹಾಯದಿಂದ ನಿರ್ಧರಿಸಬಹುದು. ನ್ಯೂಕ್ಲಿಯಸ್ ಅನ್ನು ಸರಿಪಡಿಸುವ ಸಣ್ಣ ಸೈಟೋಪ್ಲಾಸಂ ಹೊಂದಿರುವ ಏಕೈಕ ಕೋಶವೆಂದರೆ ವೀರ್ಯ. ಹೀಗಾಗಿ, ವೀರ್ಯ ವಿಭಜನೆ ಅಥವಾ ವೀರ್ಯ ಸಮಸ್ಯೆಗಳು ಹೆಚ್ಚಾಗಬಹುದು. ಸಾಧ್ಯವಾದಷ್ಟು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.
ಮಧ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸುವುದು ಉತ್ತಮ. ಭೂರ್ಣದ ಗುಣಮಟ್ಟ ಕಳಪೆಯಾಗಿದ್ದರೇ ಪದೇ ಪದೇ ವೈಫಲ್ಯ ಅನುಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್ಚು ಕಾಳಜಿಯನ್ನು ವಹಿಸಬೇಕು. ಅದರಲ್ಲೂ ಪುರುಷರು ಈ ಬಗ್ಗೆ ಹೆಚ್ಚು ಗಮನ ನೀಡಬೇಕು.
ಪದೇ ಪದೇ IVF ವೈಫಲ್ಯವನ್ನು ತಪ್ಪಿಸಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಉತ್ತಮ ಸಮತೋಲಿತ  ಹಾಗೂ ಪೋಷಕಾಂಶಯುಕ್ತ ಆಹಾರ ಸೇವಿಸಿ, ನಿಯಮಿತವಾಗಿ ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಗರಿಷ್ಠ ತೂಕವನ್ನು ಕಾಪಾಡಿಕೊಳ್ಳಿ ಮತ್ತು ಬಂಜೆತನದ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕನಿಷ್ಠ 8 ಗಂಟೆಗಳ ಉತ್ತಮ ನಿದ್ರೆ ಬಹಳ ಅವಶ್ಯಕ ಎಂಬುದನ್ನ ನೆನಪಿಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಉಪವಾಸ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?