Select Your Language

Notifications

webdunia
webdunia
webdunia
webdunia

ಗರ್ಭಿಣಿಯರಿಗೆ ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಹಿತವಲ್ಲ; ಏಕೆ ಗೊತ್ತಾ?

ಗರ್ಭಿಣಿಯರಿಗೆ ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಹಿತವಲ್ಲ; ಏಕೆ ಗೊತ್ತಾ?
ಬೆಂಗಳೂರು , ಸೋಮವಾರ, 30 ಆಗಸ್ಟ್ 2021 (13:05 IST)
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ ಕೆಲವೊಮ್ಮೆ ಬಾಯಿಯ ರುಚಿ ಚೆನ್ನಾಗಿರುವುದಿಲ್ಲ. ಕೆಲವೊಮ್ಮೆ ಮಸಾಲಯುಕ್ತ ಮತ್ತು ಹುಳಿ ಆಹಾರವನ್ನು ತಿನ್ನಲು ಹೆಚ್ಚು ಇಷ್ಟವಾಗುತ್ತದೆ.

ಇಂತಹ ಸಮಯದಲ್ಲಿ ಗರ್ಭಿಣಿಯರು ಜಂಕ್ಫುಡ್ ಮತ್ತು ಪಾಸ್ಟ್ ಫುಡ್ಗಳನ್ನು ತಿನ್ನುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜಂಕ್ಫುಡ್ ಮಹಿಳೆ ಮತ್ತು ಆಕೆಯ ಮಗುವಿನ ಆರೋಗ್ಯ ಸಮಸ್ಯೆಗಳಿಂಗೆ ತೊಂದರೆಯನ್ನುಂಟು ಮಾಡಬಹುದು. ಹಾಗಿರುವಾಗ ಗರ್ಭಾವಸ್ಥೆಯಲ್ಲಿ ಏಕೆ ಜಂಕ್ಫುಡ್ಗಳನ್ನು ತಿನ್ನಬಾರದು, ಏನೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬುದನ್ನು ತಿಳಿಯಿರಿ.
ಗರ್ಭಿಣಿಯರಿಗೆ ಹೆಚ್ಚು ಪೋಷಕಾಂಶಗಳು ಬೇಕಾಗುತ್ತವೆ. ಇದು ಮಗುವಿನ ಬೆಳವಣಿಗೆಗೆ ಅತ್ಯವಶ್ಯಕ. ಅದರ ಬದಲಾಗಿ ಜಂಕ್ ಫುಡ್ಗಳ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆರೋಗ್ಯದ ಕುರಿತಾಗಿ ಹೆಚ್ಚು ಸೂಕ್ಷ್ಮವಾಗಿರುವ ಗರ್ಭಾವಸ್ಥೆಯ ಸಮಯದಲ್ಲಿ ಹೊರಗಿನ ತಿಂಡಿಗಳ ಸೇವನೆಯನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು.
webdunia

ಜಂಕ್ ಫುಡ್ನಲ್ಲಿ ಎಣ್ಣೆ, ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿಗಳು ಅಧಿಕವಾಗಿರುತ್ತವೆ. ಇಂತಹ ಸಮಯದಲ್ಲಿ ಜಂಕ್ ಫುಡ್ನ ಅತಿಯಾದ ಸೇವನೆಯು ತೂಕವನ್ನು ವೇಹವಾಗಿ ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯ ತೂಕವು ಈಗಾಗಲೇ ನೈಸರ್ಗಿಕವಾಗಿ ಹೆಚ್ಚಾಗುತ್ತಿರುವುದರಿಂದ ಇಂತಹ ಪರಿಸ್ಥಿತಿಯಲ್ಲಿ ಜಂಕ್ ಫುಡ್ ಆಕೆಯ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಮಹಿಳೆಗೆ ಅನೇಕ ಸಮಸ್ಯೆಗಳು ಕಾಡಬಹುದು. ಜತೆಗೆ ಹೆರಿಗೆ ಸಯದಲ್ಲಿ ಕೆಲವು ಬಾರಿ ತೊಡಕು ಉಂಟಾಗುವ ಸಾಧ್ಯತೆಗಳಿರುತ್ತದೆ.
ಹೆಚ್ಚು ಜಂಕ್ ಫುಡ್ ತಿನ್ನುವುದು ಕೆಲವೊಮ್ಮೆ ಅಧಿಕ ಬಿಪಿಯ ಸಮಸ್ಯೆಗೆ ಕಾರಣವಾಗಬಹುದು. ನೀವು ಈಗಾಗಲೇ ಅಧಿಕ ಬಿಪಿ ಅಥವಾ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದರೆ ಈ ವಿಷಯದ ಕುರಿತಾಗಿ ಗಮನವಿರಲಿ. ಯಾವುದೇ ಕಾರಣಕ್ಕೂ ಜಂಕ್ ಫುಡ್ಗಳನ್ನು ಹೆಚ್ಚಾಗಿ ಸೇವಿಸದಿರುವುದು ಉತ್ತಮ.
ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಜಂಕ್ ಫುಟ್ಗಳಲ್ಲಿ ಸಕ್ಕರೆ ಮತ್ತು ಕ್ಯಾಲೋರಿಫಿಕ್ ಪದಾರ್ಥಗಳ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಗರ್ಭಾವಸ್ಥೆಯ ಮಧುಮೇಹ ಹೆಚ್ಚಿನ ಜನನ ತೂಕ ಅಥವಾ ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ಜಂಕ್ ಫುಡ್ಗಳಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಇದರ ಅತಿಯಾದ ಸೇವನೆಯು ಮಗುವಿನ ಮೆದುಳು, ಹೃದಯ, ಶ್ವಾಸಕೋಶ ಮತ್ತು ಮೂಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ನ ಅತಿಯಾದ ಸೇವನೆಯು ಹುಟ್ಟಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಕೆಲವು ಸಂಶೋಧನೆಗಳು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ಸೇವನೆಯು ಮಹಿಳೆಯರಲ್ಲಿ ಅಲರ್ಜಿ ಮತ್ತು ಅಸ್ತಮಾದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯಕಾಂತಿ ಬೀಜಗಳ ಸೇವನೆಯ ಆರೋಗ್ಯ ಪ್ರಯೋಜನಗಳು