Select Your Language

Notifications

webdunia
webdunia
webdunia
webdunia

ಉಪವಾಸ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?

ಉಪವಾಸ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
ಬೆಂಗಳೂರು , ಬುಧವಾರ, 8 ಸೆಪ್ಟಂಬರ್ 2021 (07:06 IST)
Health: ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯವಾದರೂ, ಕೆಲವೊಮ್ಮೆ ಉಪವಾಸವನ್ನು(Fasting) ಸಹ ಮಾಡುವುದು ಮುಖ್ಯವಾಗುತ್ತದೆ. ಉಪವಾಸ ಹಲವಾರು ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಉಪವಾಸವು ಒಂದು ಶಿಸ್ತು,   ಉಪವಾಸ ಮಾಡುವುದರಿಂದ ಅದೆಷ್ಟು ಪ್ರಯೋಜನಗಳು ಲಭಿಸುತ್ತದೆ ಎಂಬುದು ಹಲವಾರು ಜನರಿಗೆ ತಿಳಿದಿಲ್ಲ. ಉಪವಾಸದಿಂದ ನಮ್ಮ ದೇಹದ ಆರೋಗ್ಯ , ಮೆದುಳಿನ ಆರೋಗ್ಯ ಪ್ರತಿಯೊಂದಕ್ಕೂ ಉತ್ತಮವಾಗಿದೆ.

ಉಪವಾಸ ಮಾಡುವಾಗ ಅದರ ಪ್ರಾಮುಖ್ಯತೆಯನ್ನು ಮತ್ತು ಪ್ರಯೋಜನವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ನೀವು ಗಮನಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದರೆ ವಾರದಲ್ಲಿ ಒಂದು ದಿನವಾದರೂ ಆಹಾರವನ್ನು ಸೇವಿಸದೆ ಉಪವಾಸ ಮಾಡಿ ಎಂದು ಸಲಹೆ ನೀಡುತ್ತಾರೆ. ಯಾಕೆಂದರೆ ಒಂದು ದಿನ ಕೇವಲ ನೀರನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ವಿಷವನ್ನುಹೊರಹಾಕಲು ಸಹಾಯ ಮಾಡುತ್ತದೆ.
ನಮ್ಮ ಜೀವನ ಶೈಲಿಯಲ್ಲಿ ಆರೋಗ್ಯ ಸುಧಾರಿಸಲು ಉಪವಾಸ ಅತ್ಯಗತ್ಯವಾಗಿದೆ. ದೇಹದ ಜೀರ್ಣಕ್ರಿಯೆ ಯನ್ನು ಸರಿಪಡಿಸಲು ಉಪವಾಸ ಮುಖ್ಯ ಪಾತ್ರ ವಹಿಸುತ್ತದೆ. ಹಾಳಾದ ಜೀರ್ಣಕ್ರಿಯೆಯನ್ನು ಸರಿ ಪಡಿಸಲು ವಾರಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆಯಾದರೂ ಉಪವಾಸವಿರಬೇಕು ಎಂದು ಹೇಳುತ್ತದೆ.
ತ್ವಚೆಯ ಸಮಸ್ಯೆಗಳಿಗೆ ಉಪವಾಸ ಒಳ್ಳೆಯ ಪ್ರಯೋಜನವನ್ನು ನೀಡುತ್ತದೆ.  ಉಪವಾಸದಿಂದ ದೇಹದ ತೂಕ ಸಮ ಪ್ರಮಾಣದಲ್ಲಿ  ಕಾಪಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಮಾನಸಿಕ ಆರೋಗ್ಯಕ್ಕೂ ಉಪವಾಸ ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ, ಚಯಾಪಚಯವನ್ನು ವೇಗಗೊಳಿಸುತ್ತದೆ. ಉಪವಾಸವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ. ಇದು ದೀರ್ಘಾಯುಷ್ಯಕ್ಕೂ ಉಪವಾಸ ಒಳ್ಳೆಯದು ಎನ್ನುತ್ತಾರೆ.
ಉಪವಾಸವು ವಿವಿಧ ಅಂಗಗಳಲ್ಲಿ ಆರೋಗ್ಯಕರ ಬದಲಾವಣೆಗಳಿಗೆ ಕಾರಣವಾಗುತ್ತದೆ. ಉಪವಾಸನವು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಮೂತ್ರಪಿಂಡದಲ್ಲಿನ ವಿಷ ಮತ್ತು ಕಲ್ಲುಗಳನ್ನು ಹೊರಹಾಕಲು ಇದು ಉತ್ತಮ ಪರಿಹಾರ.  ಶ್ವಾಸಕೋಶದಲ್ಲಿನ ವಿಷ, ನೀರನ್ನು ಹೊರಹಾಕಲು ಉಪವಾಸ ಮಾಡುವುದು ಉತ್ತಮ ಅಭ್ಯಾಸ ಎಂದು ಹೇಳುತ್ತಾರೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಜೊತೆಗೆ  ಹೃದಯದ  ಕೊಬ್ಬು ಮತ್ತು ನೀರನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಬಡಿತವನ್ನು ಸುಧಾರಿಸುತ್ತದೆ.
ಉಪವಾಸವು ಯಕೃತ್ತನ್ನು ಸಡಿಲ ಮಾಡುತ್ತದೆ. ಅದರಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸಕ್ರಿಯವಾಗುತ್ತದೆ. ಉಪವಾಸವು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ಮುಖ್ಯವಾಗಿ ಸೆಳೆತ, ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಕೀಲುಗಳಲ್ಲಿ ಸಂಗ್ರಹವಾಗಿರುವ ಕೊಬ್ಬು, ನೀರು ಮತ್ತು ಮಾಂಸದಂತಹ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಉಪವಾಸ ಸಹಕಾರಿಯಾಗಿದೆ.
ಇನ್ನು ಉಪವಾಸ ಮಾಡುವಾಗ ಹಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.  ಪ್ರತಿಯೊಬ್ಬರು ಉಪವಾಸ ಮಾಡಬಾರದು. ಕೆಲ ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡಬಾರದು.
ಪದೇ ಪದೇ ಆಯಾಸ ಉಂಟಾಗುವ ಜನರು, ಹೃದ್ರೋಗ ಸಮಸ್ಯೆ ಇರುವವರು, ಮಕ್ಕಳು, ವೃದ್ಧರು, ಗರ್ಭಿಣಿಯರು,  ನವಜಾತ ಶಿಶುವಿರುವ ಮಹಿಳೆಯರು, ಕ್ಷಯ ರೋಗಿಗಳು, ರಕ್ತಹೀನತೆ ಮತ್ತು ಮಧುಮೇಹ ಇರುವವರು ಹೆಚ್ಚು ದಿನ ಉಪವಾಸ ಮಾಡಬಾರದು. ಸಾಧ್ಯವಾದಷ್ಟು ಉಪವಾಸ ಮಾಡುವುದು ಒಳ್ಳೆಯದು. ಇನ್ನು ಹೆಚ್ಚು ದೇಹದ ತೂಕವಿರುವವರು, ಅಸ್ತಮಾ, ಸಂಧಿವಾತ, ಅಧಿಕ ರಕ್ತದೊತ್ತಡ, ಚರ್ಮ ರೋಗ ಇರುವವರು ಉಪವಾಸವನ್ನು ಮಾಡಬೇಕು
ಆದರೆ ಉಪವಾಸದ ನಂತರ ಹೆಚ್ಚು ಆಹಾರವನ್ನು ಸೇವಿಸಬೇಡಿ. . ಕ್ರಮೇಣ ಆಹಾರವನ್ನು ಹೆಚ್ಚಿಸಿ. ಮೆಣಸಿನಕಾಯಿ, ಮಸಾಲೆ, ಪೇಸ್ಟ್ರಿ ಅಥವಾ ಉಪ್ಪಿನಕಾಯಿಯಂಥಹ ಮಸಾಲೆ ಪದಾರ್ಥಗಳನ್ನು ತಿನ್ನಬೇಡಿ. ಉಪವಾಸದ ನಂತರ ತಕ್ಷಣ ಆಹಾರ ತಿನ್ನುವುದರಿಂದ ಅತಿಸಾರ, ವಾಂತಿ, ಎದೆಯುರಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀವು ಎಳನೀರು ಪ್ರಿಯರೇ..? ಹಾಗಾದರೆ ಈ ಏಳು ಲಾಭಗಳ ಬಗ್ಗೆ ನೀವು ತಿಳಿಯಲೇಬೇಕು..!