Publish Date: Wed, 12 Sep 2018 (09:45 IST)
Updated Date: Wed, 12 Sep 2018 (09:47 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭ ನೋವು ಕಾಣಿಸುತ್ತಿದೆ ಎಂದು ಮಹಿಳೆಯರು ಆತಂಕಗೊಂಡಿದ್ದರೆ ಇದಕ್ಕೆ ಏನೆಲ್ಲಾ ಕಾರಣಗಳಿರಬಹುದು ಎಂದು ನೋಡೋಣ.
ರೋಗದ ಲಕ್ಷಣ
ಮಿಲನ ಕ್ರಿಯೆ ಸಂದರ್ಭದಲ್ಲಿ ನೋವಾಗುತ್ತಿದೆಯೆಂದರೆ ಅಲಕ್ಷಿಸಬೇಡಿ. ಇದು ಯಾವುದೋ ಗರ್ಭಕೋಶ ಅಥವಾ ಲೈಂಗಿಕ ಸಮಸ್ಯೆಯ ಲಕ್ಷಣಗಳಿರಬಹುದು. ಹಾಗಾಗಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಹಾರ್ಮೋನ್ ಸಮಸ್ಯೆ
ಹಾರ್ಮೋನ್ ಉತ್ಪಾದನೆ ಕೊರತೆಯಿಂದಾಗಿ ಒಣ ಯೋನಿ, ಒತ್ತಡ, ಖಿನ್ನತೆಯಿಂದಾಗಿ ಮಿಲನ ಕ್ರಿಯೆ ಯಲ್ಲಿ ನೋವಾಗಬಹುದು.
ಉದ್ರೇಕಗೊಳ್ಳುತ್ತಿಲ್ಲ
ಒಂದು ವೇಳೆ ಪ್ರತೀ ಬಾರಿಯೂ ನೋವಾಗುತ್ತಿದೆಯೆಂದರೆ ಇದಕ್ಕೆ ಕಾರಣ ನೀವು ಸಾಕಷ್ಟು ಉದ್ರೇಕಗೊಳ್ಳದೇ ಇರುವುದೂ ಆಗಿರಬಹುದು.
ಭಂಗಿ ಸರಿ ಇರಲ್ಲ
ನೀವು ಲೈಂಗಿಕ ಕ್ರಿಯೆ ನಡೆಸುವಾಗ ಅಸಹಜ ಭಂಗಿಯಲ್ಲಿ ಮಾಡುವುದರಿಂದಲೂ ನೋವು ಉಂಟಾಗಬಹುದು.
ಜನನಾಂಗದ ಗಾತ್ರ
ಸಂಗಾತಿಯ ಅಥವಾ ನಿಮ್ಮ ಜನನಾಂಗದ ಗಾತ್ರ ಹೆಚ್ಚು ಕಮ್ಮಿ ಇರುವುದರಿಂದ ನೋವು ಬರುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.